ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಹೂವು, ಸಿಹಿ ವಿತರಿಸಿ ಸ್ವಾಗತಿಸಲಾಯಿತು.
ಶಾಲೆಗೆ ಬಂದ ಮಕ್ಕಳೊಂದಿಗೆ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಕುರಿತಾಗಿ 6 ವರ್ಷದ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲಿಸಿ, 6ರಿಂದ 14 ವರ್ಷದ ಎಲ್ಲ ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸಿ, ಕೂಲಿ ಬಿಡಿ-ಶಾಲೆ ಕಲಿ, ತೊಟ್ಟಿಲನ್ನು ತೂಗುವ ಕೈ ಇಡೀ ಜಗತ್ತು ತೂಗಬಹುದು ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಲಾಯಿತು.
ಬಿ.ಇ.ಓ ವಿ.ವಿ. ನಡುವಿನಮನಿ, ಸಿಆರ್‌ಪಿ ಕೆ.ಟಿ. ಮೀರಾನಾಯ್ಕ, ಮುಖ್ಯೋಪಾಧ್ಯಾಯ ಎಸ್.ಎಸ್. ಹುಬ್ಬಳ್ಳಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗಮ್ಮ ಹಾಲಿನವರ, ಉಪಾಧ್ಯಕ್ಷ ಗವಿಶಿದ್ದಪ್ಪ ಯಳಿಶಿರುಂಜ, ಸದಸ್ಯರು, ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು.
ಎಲ್.ಪಿ.ಎಸ್ ಶಾಲೆ
ಅಲ್ಲಮಪ್ರಭುದೇವರ ಮಠದ ಹತ್ತಿರವಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ನಂತರ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅದ್ಯಕ್ಷ ಮರಿಯಪ್ಪ ವಡ್ಡರ ಪಠ್ಯ ಪುಸ್ತಕವನ್ನು ವಿತರಿಸಿದರು.
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಅಕ್ಕಮಹಾದೇವಿ ಶಿಗ್ಲಿ, ಸದಸ್ಯರಾದ ನಿರ್ಮಲಾ ಬೊರಟ್ಟಿ, ಜ್ಯೋತಿ ಮುಳಕೊಂಪಿಮಠ, ಸುಶೀಲಾ, ರೇಣುಕಾ ಕಟಿಗ್ಗಾರ, ಪ್ರಧಾನ ಗುರುಮಾತೆ ಎಸ್.ಜಿ. ಕಂಠಿ, ಎಸ್.ಬಿ. ಪಾಟೀಲ, ಎಸ್.ಕೆ. ವನಹಳ್ಳಿ, ಎಸ್.ಕೆ. ಬಳಿಗಾರ, ಜೆ.ಆರ್. ಕುಲಕರ್ಣಿ, ಎಸ್.ಎಸ್. ಅಂಕದ ಉಪಸ್ಥಿತರಿದ್ದರು.