ಅಲಗಿಲವಾಡದಲ್ಲಿ ಶಾಲಾ ಪ್ರಾರಂಭೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಲ್ಲಿನ ಅಲಗಿಲವಾಡ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಗದಗ ಜಿಲ್ಲೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಅವರ ಆದೇಶದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ನಾಣಕೀ ನಾಯಕರ ನಿರ್ದೇಶನದಂತೆ ಹೆಬ್ಬಾಳ ಕ್ಲಸ್ಟರ್ ಸಿಆರ್‌ಪಿ ತಿರಕಪ್ಪ ಪೂಜಾರ ಇವರ ಮಾರ್ಗದರ್ಶನದಲ್ಲಿ ಶಾಲೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಆರತಿ ಬೆಳಗಿ ಸ್ವಾಗತಿಸಲಾಯಿತು.

Advertisement

ಪ್ರಧಾನ ಗುರುಗಳಾದ ಹಾಲೇಶ ಎಸ್.ಜಕ್ಕಲಿ ಮಾತನಾಡಿ, ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಿ ಮಕ್ಕಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿಸಿ, ಅವರ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಬಿಸಿಊಟ, ಕ್ಷೀರಭಾಗ್ಯ ಇತ್ಯಾದಿ ಸೌಕರ್ಯಗಳನ್ನು ಇಲಾಖೆ ನೀಡುತ್ತಿದ್ದು, ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕೆಂದು ಪಾಲಕರಲ್ಲಿ ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಬಿಸಿಯೂಟದೊಂದಿಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಚ್.ಎಸ್. ರಾಮನಗೌಡ್ರ ನಿರ್ದೇಶನದಂತೆ ಮಕ್ಕಳಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮರಿಯಪ್ಪ ದೊಡ್ಡಮನಿ, ಶಿಕ್ಷಕರಾದ ನೇಮೇಶ ಯರಗುಪ್ಪಿ, ಪಾಲಕರಾದ ಫಕ್ಕೀರೇಶ ಪೂಜಾರ, ಇಮಾಮಸಾಬ ನದಾಫ್, ಮೈಲಪ್ಪ ಹರಿಜನ, ಹನುಮಪ್ಪ ಬೆಳ್ಳಟ್ಟಿ, ಮಾಬುಸಾಬ ನದಾಫ್, ಅಂಗನವಾಡಿ ಗುರುಮಾತೆ ಮಹಾದೇವಿ ಹಸವಿಮಠ, ಅಡುಗೆ ಸಿಬ್ಬಂದಿಗಳಾದ ಹುಸೇನಬಿ ನದಾಫ್ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here