ವಿಜ್ಞಾನ ರಥದ ಪ್ರಾತ್ಯಕ್ಷಿಕಾ ಕಾರ್ಯಾಗಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮತ್ತು ಪಠ್ಯದಲ್ಲಿರುವ ವೈಜ್ಞಾನಿಕ ಪ್ರಯೋಗಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸುವ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ತಮಿಳುನಾಡಿನ ರೋಟರಿ ಸಂಸ್ಥೆ 3212 (ವಿರುದುನಗರ) ಪ್ರಾಯೋಜಿತ ವಿಜ್ಞಾನ ರಥದ ಪ್ರಾತ್ಯಕ್ಷಿಕೆಯನ್ನು ಗದುಗಿನ ರೋಟರಿ ಮತ್ತು ರೋಟರಿ ಸೆಂಟ್ರಲ್ ಇವರ ಸಂಯುಕ್ತಾಶ್ರಯದಲ್ಲಿ ಪಾಶ್ವನಾಥ ಶಾಲೆ, ಸಿಡಿಓ ಜೈನ್ ಶಾಲೆ ಮತ್ತು ತೋಂಟದಾರ್ಯ ಶಾಲೆಗಳಲ್ಲಿ ಪ್ರಸ್ತುತಪಡಿಸಿದರು.

Advertisement

ಪ್ರಾತ್ಯಕ್ಷಿಕೆಯಲ್ಲಿ ಅನಿಲ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಬೆಳಕಿನ ಪ್ರತಿಫಲನ, ವಕ್ರೀಭವನ, ವಿಕಿರಣ, ಪ್ರಸರಣ ಮತ್ತು ಒಟ್ಟು ಆಂತರಿಕ ಪ್ರತಿಫಲನ ಇವುಗಳ ಬಗ್ಗೆ ಲೇಸರ್ ಲೈಟ್ ಮೂಲಕ ವಿವರಿಸಿದರು. ಗಾಳಿಯ ಚಲನೆ ಮತ್ತು ಒತ್ತಡಗಳು, ನ್ಯೂಟನ್‌ನ ಮೂರು ನಿಯಮಗಳನ್ನು ಸೂಕ್ತ ಉದಾಹರಣೆಯೊಂದಿಗೆ ತಿಳಿಸಿದರು.

ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಶಾಲಾ ಶಿಕ್ಷಕರು ಹಾಗೂ ಇನ್ನರ್‌ವ್ಹೀಲ್ ಕ್ಲಬ್ನ ಅಧ್ಯಕ್ಷರಾದ ಅಶ್ವಿನಿ ಜಗತಾಪ್, ಸಂಪಾದಕರಾದ ವೀಣಾ ಕಾವೇರಿ, ಸಿಪಿಸಿಸಿ ಮೀನಾಕ್ಷಿ ಕೊರವನವರ, ಸುಶೀಲಾ ಕೋಟಿ, ಮಂಜುಳಾ ಅಕ್ಕಿ, ಸ್ಮಿತಾ ಹೊಸೂರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here