ವಿಜ್ಞಾನ ಇಂದು ಎಲ್ಲೆಡೆ ಹಾಸುಹೊಕ್ಕಾಗಿದೆ

0
Science seminar for taluk level high school students
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮನುಕುಲದ ಪ್ರಯೋಜನಕ್ಕಾಗಿ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯಾಗಬೇಕಾಗಿದೆ. ಅದನ್ನು ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳ ಪಠ್ಯಗಳಲ್ಲಿ ಸಮನ್ವಯಗೊಳಿಸಿ ಬೋಧಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಅಭಿಪ್ರಾಯಪಟ್ಟರು.

Advertisement

ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಬಟ್ಟೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಗದಗ ಜಿಲ್ಲಾ ಅಧ್ಯಕ್ಷ ರಮೇಶ್ ರಿತ್ತಿ, ವಿಜ್ಞಾನದ ಕಲಿಕೆ ಅದು ಇತರೆ ವಿಷಯಗಳಂತೆ ಅಲ್ಲ. ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ವಿಜ್ಞಾನವನ್ನು ಸಹ ಸಂಬಂಧ ಕಲ್ಪಿಸಿ ಕಲಿಯಬೇಕು. ಅದಕ್ಕಾಗಿ ಈಗ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ನೋಡಲ್ ಅಧಿಕಾರಿ ಈಶ್ವರ ಮೆಡ್ಲೇರಿ, ಎರಡೂ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ವಿಜ್ಞಾನ ನಾಟಕ, ವಿಜ್ಞಾನ ಗೋಷ್ಠಿ ಹಾಗೂ ವಿಜ್ಞಾನದ ವಸ್ತು ಪ್ರದರ್ಶನವನ್ನು ಮಾರ್ಗದರ್ಶಿ ಶಿಕ್ಷಕರಿಂದ ತರಬೇತಿ ಪಡೆದು ಪ್ರದರ್ಶನ ನೀಡುತ್ತಾರೆ. ಪ್ರತಿ ವರ್ಷ ನಮ್ಮ ತಾಲೂಕಿನಿಂದ ವಿಭಾಗ ಮಟ್ಟಕ್ಕೆ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಅಭಿಮಾನ ಪಡುವ ವಿಷಯವಾಗಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯೆ ವಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಸಹಶಿಕ್ಷಕ ಸಂಘದ ಕಾರ್ಯದರ್ಶಿ ಎನ್.ಎನ್. ಸುಣಗಾರ, ಶಿಕ್ಷಕರಾದ ಎಂ.ಎಸ್. ಮಳಿಮಠ, ಇ.ಸಿ.ಓಗಳಾದ ಉಮೇಶ ಹುಚ್ಚಯ್ಯನಮಠ, ಹರೀಶ ಎಸ್, ನಿರ್ಣಾಯಕರಾದ ಈರಣ್ಣ ಗಾಣಿಗೇರ, ಎಚ್.ಬಿ. ಮೇಟಿ, ಮಂಜುಶ್ರೀ ಬಡಿಗೇರ, ಶಂಕ್ರಮ್ಮ ಕರೇಗೌಡ್ರ, ಗಿರೀಶ ಸುಗಜಾನರ, ಆರ್.ಆರ್. ಅಯ್ಯನಗೌಡ್ರ, ಬಿ.ಆರ್.ಪಿ ಬಿ.ಎಂ. ಯರಗುಪ್ಪಿ, ಸಿ.ಆರ್.ಪಿ ನವೀನ ಅಂಗಡಿ ಉಪಸ್ಥಿತರಿದ್ದರು.

ಮಂಜುನಾಥ ಹುಣಸಿಮರದ ನಿರೂಪಿಸಿದರು. ಶೇಖರ ಚಿಕ್ಕಣ್ಣವರ ಸ್ವಾಗತಿಸಿದರು. ಎಲ್.ಎಚ್.ಅವ್ವಣ್ಣವರ ವಂದಿಸಿದರು. ಶಿಕ್ಷಕರಾದ ರವೀಂದ್ರ ಮಳಲಿ, ಎಸ್.ಎ. ಗೊರವನಕೊಳ್ಳ, ವೀಣಾ ಜಾಧವ, ಎಂ.ಐ. ಡಂಬಳ, ಎಸ್.ಎಸ್. ಜಾಲಿಹಾಳ, ಜಿ.ಎಸ್. ಪಾಟೀಲ, ಎಂ.ವಿ. ದಾಮೋದರ, ಚೇತನಾ ಹಿರೇಮಠ ಹಾಜರಿದ್ದರು. ೨೫ ಪ್ರೌಢಶಾಲೆಗಳಿಂದ ಸುಮಾರು 100 ಕ್ಕೂ ಅಧಿಕ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶಾಲೆಗಳು

ವಿಜ್ಞಾನ ಗೋಷ್ಠಿ: ಪ್ರಥಮ-ಚೇತನಾ ಜನಗೊಣ್ಣನವರ, ಸರಕಾರಿ ಪ್ರೌಢಶಾಲೆ, ಮಾಡಳ್ಳಿ. ವಿಜ್ಞಾನ ವಸ್ತುಪ್ರದರ್ಶನ (ವೈಯಕ್ತಿಕ ವಿಭಾಗ)-ಪ್ರಥಮ-ಗಿರೀಶ ಮೇಟಿ, ಸರಕಾರಿ ಪ್ರೌಢಶಾಲೆ, ಬಟ್ಟೂರು, ವಿಜ್ಞಾನ ವಸ್ತುಪ್ರದರ್ಶನ (ಸಾಮೂಹಿಕ ವಿಭಾಗ) ಪ್ರಥಮ-ಪರಮೇಶ ಹಾಗೂ ಸಂಗಡಿಗರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಒಡೆಯರ ಮಲ್ಲಾಪುರ.

ವಿಜ್ಞಾನ ನಾಟಕ ಸ್ಪರ್ಧೆ: ಪ್ರಥಮ-ಮಧು ಹಾಗೂ ಸಂಗಡಿಗರು, ಶ್ರೀ ಭೀಮರಡ್ಡಿ ಅಳವಂಡಿ ಕೆ.ಪಿ.ಎಸ್ ಬೆಳ್ಳಟ್ಟಿ.


Spread the love

LEAVE A REPLY

Please enter your comment!
Please enter your name here