ಬೆಂಗಳೂರು:- ಫಾರ್ಚೂನರ್ ಕಾರಿಗೆ ಜಾಗ ಬಿಟ್ಟಿಲ್ಲ ಅಂತ ಚಾಲಕನಿಗೆ ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆ ನಡೆದಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
Advertisement
ಗುಂಪೊಂದು ಫಾರ್ಚೂನರ್ ಕಾರಿನಲ್ಲಿ ಹೋಗುತ್ತಿತ್ತು. ಈ ವೇಳೆ ಮುಂದೆ ಇದ್ದ ಖಾಸಗಿ ವಾಹನದ ಚಾಲಕ ಮುಂದೆ ಹೋಗೋಕೆ ಬಿಟ್ಟಿಲ್ಲ ಅಂತಾ ಖಾಸಗಿ ವಾಹನ ಚಾಲಕನ ಮೇಲೆ ಹಲ್ಲೆ ನಡೆದಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಡಾ. ಪ್ರಜ್ವಿತ್ ರೈ ಎಂಬಾತ ಅಸಹಾಯಕರ ಮೇಲೆ ಈ ರೀತಿ ದರ್ಪ ತೋರುವವರಿಗೆ ಶಿಕ್ಷೆ ಆಗ್ಬೇಕು ಅಂತಾ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ದರ್ಶನ್ ಮತ್ತು ರೇಣುಕಾಸ್ವಾಮಿ ಹೆಸ್ರು ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಮಾಹಿತಿ ಪಡೆದಿರೋ ಪೊಲೀಸರು ಕಾರಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.