ಗ್ರಂಥಗಳು ಬಾಳಿನ ದಾರಿದೀಪ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಂಥಗಳು ನಮ್ಮ ಬಾಳಿನ ದಾರಿದೀಪಗಳು. ಗ್ರಂಥಾಲಯದ ಉಪಯೋಗ ಮಾಡುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಮನೆಮನೆಗಳಲ್ಲಿಯೂ ಒಂದು ಪುಟ್ಟ ಗ್ರಂಥಾಲಯವಿದ್ದರೆ ಅದು ನಮ್ಮ ಜ್ಞಾನದ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುತ್ತದೆ ಎಂದು ಅಬ್ಬಿಗೆರೆ ಪಿಕೆಪಿಎಸ್ ಅಧ್ಯಕ್ಷ ಗುರುನಾಥ ಅವರೆಡ್ಡಿ ಹೇಳಿದರು.

Advertisement

ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಅರಿವು ಕೇಂದ್ರ ಹಾಗೂ ಬಸವರಾಜ ತಳವಾರ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ವಾಲ್ಮಿಕಿ ಸಮಾಜದ ಅಧ್ಯಕ್ಷರಾದ ಬಸವರಾಜ ತಳವಾರ ಇವರ ಜನ್ಮದಿನದ ನಿಮಿತ್ತ ಅಬ್ಬಿಗೇರಿಯ ಅರಿವು ಕೇಂದ್ರದಲ್ಲಿ ನಡೆದ ಪುಸ್ತಕ ದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥಾಲಯಗಳು ಸಂಶೋಧನೆ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಸಹಾಯಕವಾಗುತ್ತವೆ. ಜನ್ಮ ದಿನಾಚರಣೆಗಳನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬುದನ್ನು ಗ್ಯಾರಂಟಿ ಸಮಿತಿ ಸದಸ್ಯ ಬಸವರಾಜ ತಳವಾರ ಅವರು ಅರಿವು ಕೇಂದ್ರಕ್ಕೆ ಗ್ರಂಥ ದಾನ ಮಾಡುವ ಮೂಲಕ ತೋರಿಸಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ಅಭಿಪ್ರಾಯಪಟ್ಟರು.

ಗ್ರಾ.ಪಂ. ಅಧ್ಯಕ್ಷೆ ಲಲಿತಾ ರಾಠೋಡ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಅಂದಪ್ಪ ವೀರಾಪೂರ, ಮಂಜು ಪಸಾರದ, ಎಂ. ಲೋಹಿತ್, ಮಹದೇವಪ್ಪ ಕಂಬಳಿ, ಜಗದೀಶ ಅವರೆಡ್ಡಿ, ದುರುಗೇಶ ಬಂಡಿವಡ್ಡರರ, ಆನಂದ ಹಿರೇಮನಿ, ಮಲ್ಲಯ್ಯ ಮಠಪತಿ, ಸಚಿನ್ ಪಾಟೀಲ, ಶಿವಪುತ್ರಪ್ಪ ಕೆಂಗಾರ, ರೇಖಾ ಅವರೆಡ್ಡಿ, ರೇಖಾ ವೀರಾಪೂರ, ಅಕ್ಕಮ್ಮ ಡೊಳ್ಳಿನ, ರತ್ನಕ್ಕ ಮಾಳಶೆಟ್ಟಿ, ಚನ್ನಮ್ಮ ತಳವಾರ, ಸಿ.ಆರ್.ಸಿ ಶರಣಪ್ಪ ಮೂಲಿಮನಿ, ವೀರೇಶ ಶಿದ್ನೆಕೊಪ್ಪ, ವಿಜಯಕುಮಾರ ಇಟಗಿ, ಪರಶುರಾಮ ಹಡಪದ ಮುಂತಾದವದ್ದರು. ಆರ್.ಡಿ. ರಂಗಣ್ಣವರ ಸ್ವಾಗತಿಸಿದರು. ಡಿ.ಎಚ್. ಪರಂಗಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here