ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಹೋಬಳಿಯ ಪೇಠಾ-ಆಲೂರ ಗ್ರಾಮದ ಎಂಸಿಎಸ್ ಶಾಲೆಯ ಕಟ್ಟಡದಲ್ಲಿ ಶಾಲಾ ಕಟ್ಟಡದ ಗೇಟ್ ಮತ್ತು ಶಾಲಾ ಕೊಠಡಿಯ ಬೀಗಒಡೆದು ಕೆಲ ಕಂಪನಿಯವರಿಗೆ ಸಂಬಂಧಿಸಿದ ಸಿಮೆಂಟನ್ನು ಅಕ್ರಮವಾಗಿ ಶೇಖರಿಸಿಟ್ಟ ಆರೋಪ ಕೇಳಿಬಂದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಶಾಲೆ ಪ್ರಾರಂಭವಾಗಲಿದ್ದು, ಸಾವಿರಾರು ಸಿಮೆಂಟ್ ಚೀಲಗಳನ್ನು ಸಂಗ್ರಹಿಸಿಟ್ಟ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳು ಕುಳಿತು ಪಾಠ ಕಲಿಯುವ ಸ್ಥಿತಿ ಎದುರಾಗಿದೆ. ಎಸ್‌ಡಿಎಂಸಿ ಅಧ್ಯಕ್ಷರು ಸಿಮೆಂಟ್ ಚೀಲಗಳನ್ನು ಸಂಗ್ರಹಿಸಿಡುವ ಕುರಿತು ನಮಗೆ ಮೊದಲು ಯಾವುದೇ ಮಾಹಿತಿ ನೀಡಿಲ್ಲ. 2-3 ದಿನಗಳು ಕಳೆದ ನಂತರ ಶಾಲೆಗೆ ಹೋದ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರಷ್ಟೇ. ರಾತೋರಾತ್ರಿ ಶಾಲಾ ಕೊಠಡಿಯ ಕೀಲಿಯನ್ನು ಮುರಿದು ಸಾವಿರಾರು ಸಿಮೆಂಟ್ ಚೀಲಗಳನ್ನು ಸಂಗ್ರಹಿಸಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಫ್. ಗೌರಿ ಆರೋಪಿಸಿದ್ದಾರೆ.



