ಮಂಗಳೂರು: ಧರ್ಮಸ್ಥಳದ ಸಮಾಧಿ ರಹಸ್ಯದ ಬಗ್ಗೆ ಎಸ್ಐಟಿ ತನಿಖೆ ನಿರ್ಣಾಯಕ ಹಂತ ತಲುಪಿದೆ. ಸಾಕ್ಷ್ಯ ದೂರುದಾರ ಗುರುತು ಮಾಡಿದ ಜಾಗಗಳಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಕಾರ್ಯಾಚರಣೆ ಕೂಡ ಕೊನೆಯ ಹಂತಕ್ಕೆ ಬಂದಿದೆ.
ಮಾಸ್ಕ್ ಮ್ಯಾನ್ ತೋರಿಸಿ ಕಡೆಯ 13ನೇ ಜಾಗದಲ್ಲಿ ಇಂದು ಶೋಧ ಕಾರ್ಯ ನಡೆಯಲಿದೆ. ದೂರುದಾರ ತೋರಿಸಿದ 13ನೇ ಜಾಗವನ್ನು ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ ಮೂಲಕ ಪರಿಶೋಧನೆ ನಡೆಸುವ ಸಾಧ್ಯತೆಯಿದೆ.
ಪ್ರಣವ್ ಮೊಹಾಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು ಅಗೆಯದೆಯೇ ಭೂಮಿಯಡಿ ಇರುವ ವಸ್ತುಗಳನ್ನು ಪತ್ತೆಹಚ್ಚಬಲ್ಲ ಜಿಪಿಆರ್ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಈಗಾಗಲೇ ಬೆಳ್ತಂಗಡಿ ಕಚೇರಿಯಲ್ಲಿ ಎಸ್ ಐಟಿ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ದೂರುದಾರರು ಸೇರಿದ್ದಾರೆ. ಇಂದು 13 ನೇ ಸ್ಥಳದ ಕಾರ್ಯಾಚರಣೆ ನಡೆದರೆ, ಮಧ್ಯಂತರ ವರದಿ ಸರ್ಕಾರಲ್ಕೆ ಸಲ್ಲಿಸುವ ಸಾಧ್ಯತೆ ಇದೆ.
ಇಂದಿನ ಕಾರ್ಯಾಚರಣೆ ಬಳಿಕ , ಎಸ್ ಐಟಿಗೆ ದಾಖಲಾಗಿರುವ ಹೆಚ್ಚುವರಿ 3 ದೂರುಗಳನ್ನು ತನಿಖೆ ನಡೆಸುವ ಸಾಧ್ಯತೆ ಇದೆ. ಪ್ರಮುಖವಾಗಿ 15 ವರ್ಷದ ಬಾಲಕಿಯನ್ನು ಪೊಲೀಸ್ ಅಧಿಕಾರಿಯೇ ಹೂತು ಹಾಕಿರುವ ಜಾಗದ ಬಗ್ಗೆ ಶೋಧ ಕಾರ್ಯ ನಡೆಸುವ ಸಾಧ್ಯತೆ ಇದೆ.