ಜೂನಿಯರ್ ಪರೀಕ್ಷೆಯಲ್ಲಿ ದ್ವೀತಿಯ ಸ್ಥಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾರ್ಮೋನಿಯಂ ವಾದ್ಯದ ಜೂನಿಯರ್ ಪರೀಕ್ಷೆಯಲ್ಲಿ ನಗರದ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರಿ ಗವಾಯಿಗಳ ಸಂಗೀತ ಪಾಠಶಾಲೆಯ ವಿದ್ಯಾರ್ಥಿನಿ ದಿಯಾ ಪೀರಸಾಬ್ ಕೌತಾಳರು ಸಂಗೀತ ವಿಶ್ವವಿದ್ಯಾಲಯಕ್ಕೆ ದ್ವಿತೀಯ ಮತ್ತು ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

Advertisement

ಕೆಎಸ್‌ಆರ್‌ಟಿಸಿ ನಿಗಮದ ಉಪಾಧ್ಯಕ್ಷರಾದ ಪೀರಸಾಬ್ ಕೌತಾಳರ ಪುತ್ರಿಯಾಗಿರುವ ದಿಯಾ ಕೌತಾಳರಿಗೆ ಮೈಸೂರ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿಗಳಾದ ಪ್ರೊ. ನಾಗೇಶ ಬೆಟ್ಟಕೊಡೆ, ಅಂತಾರಾಷ್ಟ್ರೀಯ ವಾಯೋಲಿನ್ ವಾದಕರು ಮತ್ತು ಸಂಗೀತ ವಿದ್ವಾಂಸರಾದ ಡಾ. ಮೈಸೂರು ಮಂಜುನಾಥ ಅವರು ಪ್ರಮಾಣಪತ್ರ ನೀಡಿದರು.


Spread the love

LEAVE A REPLY

Please enter your comment!
Please enter your name here