ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿಯ ಸರ್ಕಾರಿ ಸ್ವತಂತ್ರ ಪ.ಪೂ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.70ರಷ್ಟಾಗಿದೆ. ಕಲಾ ವಿಭಾಗದ ವಿದ್ಯಾರ್ಥಿಗಳಾದ ಭಾರತಿ ಜಂಬೇರಾಳ ಶೇ. 94, ಮಂಜುನಾಥ ಮೊಟಳ್ಳಿ ಶೇ. 91, ಕವನಾ ತಳವಾರ ಶೇ. 90ರಷ್ಟು ಅಂಕ ಗಳಿಸಿದ್ದಾರೆ.
Advertisement
ವಾಣಿಜ್ಯ ವಿಭಾಗದಲ್ಲಿ ಶಿಲ್ಪಾ ಪಾಟೀಲ ಶೇ. 86, ಪೂಜಾ ಗೋದಿ ಶೇ. 85, ಸಂಗೀತಾ ರಾಯಮ್ಮನವರ ಶೇ. 85, ಮತ್ತು ವಿಜ್ಞಾನ ವಿಭಾಗದಲ್ಲಿ ವಿದ್ಯಾಶ್ರೀ ಉಳ್ಳಟ್ಟಿ ಶೇ. 85, ಗಿರಿಯಪ್ಪ ಬನ್ನಿಕೊಪ್ಪ ಶೇ. 85, ವನಜಾಕ್ಷಿ ಹುಲಬಜಾರ ಶೇ. 78 ಅಂಕ ಪಡೆದಿದ್ದಾರೆ. ಸಂಗೀತಾ ರಾಯಮ್ಮನವರ ಮತ್ತು ಆದಿತ್ಯಾ ಹಡಗಲಿ ಕನ್ನಡ ವಿಷಯದಲ್ಲಿ 100ರಷ್ಟು ಅಂಕ ಗಳಿಸಿದ್ದಾರೆ.