ಬೆಂಗಳೂರು:- ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕಾತುರದ ಕ್ಷಣಕ್ಕೆ ಕೊನೆಗೂ ತೆರೆ ಬಿದ್ದಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ, 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಫಲಿತಾಂಶದ ಪ್ರಕಾರ, ಉಡುಪಿ ಜಿಲ್ಲೆಗೆ ಶೇ.93.90ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನ ಸಿಕ್ಕರೆ, ಯಾದಗಿರಿ ಜಿಲ್ಲೆಗೆ 48.45ಕೊನೆಯ ಸ್ಥಾನ ಸಿಕ್ಕಿದೆ. 2ನೇ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ 3ನೇ ಸ್ಥಾನ ಬೆಂಗಳೂರು ದಕ್ಷಿಣಕ್ಕೆ ಸಿಕ್ಕಿದೆ.
ಫಲಿತಾಂಶ 2025 ಪರಿಶೀಲಿಸುವುದು ಹೇಗೆ?
ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kseab.karnataka.gov.in ಮತ್ತು karresults.nic.in ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಕುವ ಮೂಲಕ ವೀಕ್ಷಿಸಬಹುದು. 2025 ರ ದ್ವಿತೀಯ ಪಿಯುಸಿ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು ಡೌನ್‌ಲೋಡ್ ಮಾಡಿ.