ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ-2025ರ ಅಂಗವಾಗಿ ಏರ್ಪಡಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ಬೆಟಗೇರಿಯ ಎಸ್.ಎಸ್.ಕೆ. ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಶ್ರೀ ಎಲ್.ಎನ್. ಬದಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
Advertisement
ಶಾಲೆಯ ಸಹ ಶಿಕ್ಷಕಿಯರಾದ ಎ.ಎನ್. ಮಾಂತಾ ಹಾಗೂ ಪೂಜಾ ಪಾಟೀಲ್ ಅವರು ಸಹಕಾರ ನೀಡಿದ್ದರು. ಬೆಟಗೇರಿ ಎಸ್.ಎಸ್.ಕೆ. ಪಂಚ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಲೋಕನಾಥ ಬಿ.ಕಬಾಡಿ, ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಗೋವಿಂದರಾಜ ವಿ.ಬಸವಾ, ವೈಸ್ ಚೇರ್‌ಮನ್ ದತ್ತು ಉ.ಪವಾರ, ಸಂಸ್ಥೆಯ ಮುಖ್ಯೋಪಾಧ್ಯಾಯೆ ಶಿಲ್ಪಾ ಡಿ.ಬೆಣಕಲ್ ಹಾಗೂ ಮಕ್ಕಳ ಪಾಲಕರು ವಿದ್ಯಾರ್ಥಿಗಳ ಸಾಧನೆಗೆ ಶುಭ ಹಾರೈಸಿದ್ದಾರೆ.