HomeLife Styleನಿಮಗೆ ಕಾಡುವ ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿವೆ ನೋಡಿ ಸುಲಭ ಸರಳ ಮನೆ ಮದ್ದು!

ನಿಮಗೆ ಕಾಡುವ ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿವೆ ನೋಡಿ ಸುಲಭ ಸರಳ ಮನೆ ಮದ್ದು!

For Dai;y Updates Join Our whatsapp Group

Spread the love

ಜೀವನಶೈಲಿಯಲ್ಲಿನ ಬದಲಾವಣೆ, ಡಯಟ್ ಮುಂತಾದವು ಇತ್ತೀಚೆಗೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೆಚ್ಚುತ್ತಿದೆ. ಸಾಕಷ್ಟು ನೀರು ಕುಡಿಯದಿರುವುದು, ಕ್ಯಾಲ್ಸಿಯಂ ಅಂಶದ ಹೆಚ್ಚಳ, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದಿರುವುದು ಮತ್ತು ಹೆಚ್ಚು ಔಷಧಿ ತೆಗೆದುಕೊಳ್ಳುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಬಹುದು.

ಮೂತ್ರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದ ಮಟ್ಟ ಹೆಚ್ಚಿದ್ದರೆ ಅವು ಸ್ವಾಭಾವಿಕವಾಗಿ ಹೊರಗೆ ಹೋಗುವುದಿಲ್ಲ. ಅವು ಮೂತ್ರದಲ್ಲಿ ಸಂಗ್ರಹವಾಗಿ ನಂತರದ ದಿನಗಳಲ್ಲಿ ಕಲ್ಲುಗಳನ್ನು ರೂಪಿಸುತ್ತವೆ. ಕಿಡ್ನಿ ಕಲ್ಲಿನ ಸಮಸ್ಯೆಯನ್ನು ಮತ್ತು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಕಿಡ್ನಿ ಸಮಸ್ಯೆಯನ್ನು ದೂರವಿಡಬಹುದು.

ನೀರು, ಎಳನೀರು, ಕಷಾಯ

ದೇಹದಲ್ಲಿನ ಅನುಪಯುಕ್ತ ದ್ರವ್ಯಗಳನ್ನು ದೇಹದಿಂದ ಹೊರಹಾಕಲು ಮೂತ್ರಪಿಂಡಗಳು ಸತತವಾಗಿ ಕೆಲಸ ಮಾಡುತ್ತವೆ. ಮೂತ್ರ ಪಿಂಡದ ಕೆಲಸ ಸರಿಯಾಗಿ ಆಗದಿದ್ದರೆ ಕಿಡ್ನಿಸ್ಟೋನ್‌ನಂತಹ ಸಮಸ್ಯೆ ಕಾಡುತ್ತದೆ. ಮೂತ್ರ ಪಿಂಡಗಳ ಕೆಲಸ ಸರಿಯಾಗಿ ಆಗಬೇಕೆಂದರೆ ನೀರು, ಎಳನೀರು, ಕಷಾಯದಂತಹ ದ್ರವ ಪದಾರ್ಥಗಳ ಸೇವನೆ ಹೆಚ್ಚಿಗೆ ಇರಬೇಕು. ಆಗ ಮೂತ್ರಪಿಂಡಗಳು ದೇಹದಲ್ಲಿರುವ ಬೇಡದ ವಸ್ತುಗಳನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಪ್ರತಿನಿತ್ಯ ಸುಮಾರು 3 ಲೀಟರ್ ನೀರು‌, ದಿನಕ್ಕೆ ಒಂದು ಅಥವಾ ಎರಡು ಎಳನೀರಿನ ಸೇವನೆ ಮಾಡುತ್ತಿರಿ.

ಬೀನ್ಸ್‌ ಕಾಳು

ಆಯುರ್ವೇದದ ಪ್ರಕಾರ, ಕಿಡ್ನಿಯನ್ನೇ ಹೋಲುವ ಈ ತರಕಾರಿ ಕಿಡ್ನಿಯ ಅನಾರೋಗ್ಯವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಆಕಾರವಿರುವ ಬೀನ್ಸ್‌ಗಳ ಸೇವನೆ ಒಳ್ಳೆಯದು ಯಾಕೆಂದರೆ ಈ ಬೀನ್ಸ್‌ಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಖನಿಜ. ಬೀನ್ಸ್ ಮೃದುವಾಗುವವರೆಗೆ ಬೇಯಿಸಿ ತಿನ್ನಬಹುದು ಅಥವಾ ಸಾಂಬಾರ್‌, ಕಾಳಿನ ಪಲ್ಯವನ್ನು ಮಾಡಿ ಸೇವಿಸಬಹುದು.

ಬಾಳೆ ತಿರುಳು

ಬಾಳೆ ಗಿಡದ ತಿರುಳು ಅಥವಾ ದಿಂಡುಗಳು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿವೆ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮೂತ್ರಪಿಂಡದ ಕಲ್ಲುಗಳನ್ನು ಯಶಸ್ವಿಯಾಗಿ ತಡೆಯುತ್ತದೆ. ಬಾಳೆದಿಂಡುಗಳಲ್ಲಿರುವ ಮೆಗ್ನೀಸಿಯಮ್ ಹೆಚ್ಚುವರಿ ಆಕ್ಸಲೇಟ್‌ಗಳೊಂದಿಗೆ ಸುಲಭವಾಗಿ ಸಂಯೋಜಿಸುತ್ತವೆ. ಇದರಿಂದಾಗಿ ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳ ರಚನೆಯನ್ನು ತಡೆಯುತ್ತದೆ.

ನಿಂಬೆ ರಸ

ನಿಂಬೆ ರಸದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಗೇ ಸಿಟ್ರೇಟ್‌ ಕೂಡ. ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಕಾರಣವಾಗುತ್ತದೆ. ಲಿಂಬೆ ರಸವು ಹೇರಳವಾದ ಸಿಟ್ರೇಟ್ ಅನ್ನು ಹೊಂದಿದೆ. ಹೀಗಾಗಿ ಇದು ಮೂತ್ರಪಿಂಡದ ಕಲ್ಲುಗಳಿಗೆ ಉತ್ತಮ ಮನೆಮದ್ದು. ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಸೇವನೆ ಮಾಡಿ. ಆದಷ್ಟು ತಾಜಾ ನಿಂಬೆ ರಸ ಬಳಸಿ.

ದಾಳಿಂಬೆ ಹಣ್ಣು

ದಿನಕ್ಕೆ ಒಂದು ದಾಳಿಂಬೆ ಹಣ್ಣು ಅಥವಾ ಒಂದು ಲೋಟ ದಾಳಿಂಬೆ ರಸವನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಬಹುದಾಗಿದೆ. ದಾಳಿಂಬೆಯ ಪೋಷಕಾಂಶಗಳು ಹಾಗೂ ನಿರೋಧಕ ಗುಣಲಕ್ಷಣಗಳು ಕಿಡ್ನಿಗೆ ಬೇಕಾದ ದ್ರವಾಂಶವನ್ನು ಪೂರೈಸಿ ಕಾರ್ಯ ಚಟುವಟಿಕೆಯನ್ನು ಸರಾಗಗೊಳಿಸುತ್ತದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!