ಬಾದಾಮಿ ಹಾಲು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ!

0
Spread the love

ಸಾಮಾನ್ಯವಾಗಿ ಜನರು ಆರೋಗ್ಯದ ಹಿತದೃಷ್ಟಿಯಿಂದ ಹಸುವಿನ ಹಾಲಿನ ಸೇವನೆ ಮಾಡ್ತಾರೆ. ಕೆಲವು ಔಷಧಗಳ ಸೇವನೆಯು ಹಾಲಿನ ಜೊತೆಗೆ ಇರುತ್ತದೆ. ಹಾಲಿನ ಸೇವನೆಯು ಆರೋಗ್ಯ ವೃದ್ಧಿಸುತ್ತದೆ. ಹಾಗೆಯೇ ಎಂದಾದರೂ ನೀವು ಬಾದಾಮಿ ಹಾಲು ಸೇವಿಸಿದ್ದೀರಾ? ಬಾದಾಮಿ ಹಾಲು ಕೂಡ ಸಾಕಷ್ಟು ಆರೋಗ್ಯ ಲಾಭಗಳನ್ನು ನೀಡುತ್ತದೆ.

Advertisement

ಇವುಗಳು ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದ್ದು, ತೂಕ ನಷ್ಟ ಮತ್ತು ಉತ್ತಮ ಮೂಳೆ ಆರೋಗ್ಯದಿಂದ ಹಿಡಿದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವವರೆಗೆ ಇದು ಸಹಕಾರ ನೀಡುತ್ತದೆ.

ಹೃದಯ ರೋಗಗಳು, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನನಿತ್ಯದಲ್ಲಿ ಬಾದಾಮಿಯ ನಿಯಮಿತವಾಗಿ ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ.

  1. ತೂಕವನ್ನು ಕಡಿಮೆ ಮಾಡುತ್ತದೆ: ಸಾಮಾನ್ಯವಾಗಿ ಜನರು ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ ಎಂದು ಭಾವಿಸುತ್ತಾರೆ. ಆದರೆ ಬಾದಾಮಿಯನ್ನು ಪಾನೀಯವಾಗಿ ಬಳಸಿದರೆ ಅದು ಕಡಿಮೆ ಕ್ಯಾಲೋರಿ ಪಾನೀಯವಾಗುತ್ತದೆ. ಹಾಗಾಗಿ ಕಡಿಮೆ ಕೊಬ್ಬಿನ ಆಹಾರವನ್ನು ತಿನ್ನಲು ಬಯಸುವವರು ಬಾದಾಮಿ ಹಾಲನ್ನು ಕುಡಿಯುವುದು ಉತ್ತಮ . ಏಕೆಂದರೆ ಇದು ಇತರ ಹಾಲುಗಿಂತ ಶೇ. 80 ರಷ್ಟು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ.
  2. ಸಕ್ಕರೆ ಕಡಿಮೆ: ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಹಾಲಿನ ಬದಲಾಗಿ ನೀವು ಬಾದಾಮಿ ಹಾಲನ್ನು ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇರುತ್ತದೆ. ಹಾಗೆಯೇ ಫೈಬರ್ ಅಂಶವು ಬಾದಾಮಿ ಹಾಲಿನಲ್ಲಿ ಸಮೃದ್ಧವಾಗಿರುತ್ತದೆ.
  3. ವಿಟಮಿನ್ ಇ ಸಮೃದ್ಧ: ನೀವು ಪ್ರತಿದಿನ ಒಂದು ಕಪ್ ಬಾದಾಮಿ ಹಾಲನ್ನು ಸೇವಿಸಿದರೆ, ಅದು ದಿನಕ್ಕೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಇ ಯ 20 ರಿಂದ 50 ಪ್ರತಿಶತದಷ್ಟು ಪೂರೈಸುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಇದು ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಒತ್ತಡ, ಉರಿಯೂತದ ಸಮಸ್ಯೆಗಳನ್ನು ದೂರ ಮಾಡುತ್ತದೆ.
  4. ಭರಪೂರ ಕ್ಯಾಲ್ಸಿಯಂ: ನೀವು ಪ್ರತಿದಿನ ಒಂದು ಕಪ್ ಬಾದಾಮಿ ಹಾಲನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಶೇ. 20 ರಿಂದ 45 ರಷ್ಟು ಕ್ಯಾಲ್ಸಿಯಂ ಪಡೆಯಬಹುದು. ಇದು ನಿಮ್ಮ ಹೃದಯ, ಮೂಳೆಗಳು, ನರಗಳು ಇತ್ಯಾದಿಗಳ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
  5. ವಿಟಮಿನ್ ಡಿ: ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದ್ದು, ಇದು ಹೃದಯದ ಕಾರ್ಯ, ಮೂಳೆಯ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹೀಗಾಗಿ ದೇಹದ ಆರೋಗ್ಯಕ್ಕೆ ಬಾದಾಮಿ ಹಾಲು ಅತ್ಯುತ್ತಮ ಆಯ್ಕೆಯಾಗಿದೆ.
  6. ಲ್ಯಾಕ್ಟೋಸ್ ಮುಕ್ತ ಹಾಲು: ಅನೇಕರು ಲ್ಯಾಕ್ಟೋಸ್ ಹೊಂದಿರುವ ಹಾಲನ್ನು ಸೇವಿಸುವುದಿಲ್ಲ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಲ್ಯಾಕ್ಟೋಸ್ ಹಾಲಿನ ಬದಲಾಗಿ ಸೋಯಾ ಮಿಲ್ಕ್​ ಅನ್ನು ಸೇವಿಸುತ್ತಾರೆ. ಆದರೆ ಸೋಯಾ ಹಾಲು ಸೇವಿಸಲು ಇಚ್ಛಿಸಿದವರಿಗೆ ಬಾದಾಮಿ ಹಾಲು ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಹಾಲಿನಿಂದ ಪಡೆಯಬಹುದಾದ ಎಲ್ಲಾ ಆರೋಗ್ಯಕರ ಪೌಷ್ಠಿಕಾಂಶಗಳನ್ನು ಬಾದಾಮಿ ಹಾಲಿನ ಸೇವನೆ ಮೂಲಕ ತಮ್ಮದಾಗಿಸಿಕೊಳ್ಳಬಹುದು.

 


Spread the love

LEAVE A REPLY

Please enter your comment!
Please enter your name here