ಬೆಂಗಳೂರು: ಪುನೀತ್ ರಾಜ್‍ಕುಮಾರ್ 50ನೇ ಹುಟ್ಟುಹಬ್ಬ ಹಿನ್ನೆಲೆ, ಬೆಳ್ಳಂಬೆಳಗ್ಗೆ ಪುನೀತ್ ಸಮಾಧಿ ಬಳಿ ಅಭಿಮಾನಿಗಳ ದಂಡೆ ಹರಿದು ಬಂದಿದೆ. ಇನ್ನೂ ಬೆಂಗಳೂರಲ್ಲಿ ಅಪ್ಪು ಸಮಾಧಿಗೆ ನಟ ಯುವ ರಾಜ್‍ಕುಮಾರ್ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು,
Advertisement
ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲ ನೋಡಿದ್ರೆ ಚಿಕ್ಕಪ್ಪ ಇಲ್ಲೇ ನಮ್ಮ ಜೊತೆ ಇದ್ದಾರೆ ಎನಿಸುತ್ತದೆ. ಅಪ್ಪು ಸಿನಿಮಾ ರೀ-ರಿಲೀಸ್ ಆದಾಗಲೂ ಅಭಿಮಾನಿಗಳು ಹೊಸ ಸಿನಿಮಾ ರಿಲೀಸ್ ಆದಂತೆ ಬಂದು ನೋಡ್ತಿದ್ದಾರೆ.
ಅವ್ರ ಹೆಸ್ರಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನ, ಶಿಬಿರಗಳನ್ನ ಮಾಡ್ತಿದ್ದಾರೆ. ನನಗೆ ಇವತ್ತು ಶೂಟಿಂಗ್ ಇರೋ ಕಾರಣ ಬೇಗ ಬಂದಿದ್ದೀನಿ. ಆಮೇಲೆ ಮನೆಯವರು ಬರುತ್ತಾರೆ ಎಂದರು.