ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಪೋಸ್ಟ್ ಹಂಚಿಕೊಂಡಿದ್ದ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಹಾಕಿದ್ದು ಈ ಬಗ್ಗೆ ನಟಿ ರಮ್ಯಾ ದೂರು ದಾಖಲಿಸಿದ್ದಾರೆ. ಇದೀಗ ಈ ಬಗ್ಗೆ ಮಾತನಾಡಿರುವ ಸೈಬರ್ ತಜ್ಞೆ ಡಾ. ಶುಭಾ, ಫೇಕ್ ಅಕೌಂಟ್‌ನಿಂದ ಅಶ್ಲೀಲ ಮೆಸೇಜ್, ಪೋಸ್ಟ್ ಹಾಕಿದರೆ 5 ವರ್ಷ ಜೈಲು, ದಂಡ ವಿಧಿಸುತ್ತಾರೆ ಎಂದಿದ್ದಾರೆ.
ಫೇಕ್ ಅಕೌಂಟ್‌ನಿಂದ ಅಶ್ಲೀಲ ಮೆಸೇಜ್ ಮಾಡಿದರೆ ಗೊತ್ತಾಗೋದಿಲ್ಲ ಎಂದು ಎಂದುಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಫೇಕ್ ಅಕೌಂಟ್ ನಿಂದ ಮೆಸೇಜ್ ಮಾಡಿದರೆ ಒಂದೇ ದಿನದಲ್ಲಿ ಟ್ರೇಸ್ ಔಟ್ ಮಾಡಬಹುದು. 43 ಅಕೌಂಟ್‌ಗಳನ್ನು ಒಂದೇ ದಿನದಲ್ಲಿ ಟ್ರೇಸ್ ಔಟ್ ಮಾಡೋದು ಕಷ್ಟವಲ್ಲ. ಹೊಸ ಟೆಕ್ನಾಲಜಿ ಬಳಕೆ ಮಾಡಿಕೊಂಡು ಐಪಿ ಅಡ್ರೆಸ್ ಮೂಲಕ ಪತ್ತೆ ಹಚ್ಚಬಹುದು. ಯಾರೇ ಬಳಕೆ ಮಾಡುತ್ತಿದ್ದರೂ, ಯಾವುದೇ ಬೇರೆ ಹೆಸರು ಹಾಕಿಕೊಂಡಿದ್ದರೂ ಪತ್ತೆ ಹಚ್ಚಬಹುದು. ಇದಕ್ಕೆ ಸೈಬರ್ ಕಾಯ್ದೆ ಪ್ರಕಾರ, ಐದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸುತ್ತಾರೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಶುಭ, ಮಹಿಳೆಯರು, ಯುವತಿಯರು ಇಂಟರ್‌ನೆಟ್‌ಲ್ಲಿ ತಮ್ಮ ದಿನಚರಿಯನ್ನು ಅಪ್ಲೋಡ್ ಮಾಡೋದನ್ನು ನಿಲ್ಲಿಸಬೇಕು. ಇದೆಲ್ಲ ಅಪಾಯಕ್ಕೆ, ಸೈಬರ್ ಹ್ಯಾಕ್‌ಗೆ ಕಾರಣ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.