ವಿಜಯಸಾಕ್ಷಿ ಸುದ್ದಿ, ಮಂಗಳೂರು : `ಉರುಮಾಲ್’ ಮಾಸಪತ್ರಿಕೆಯ ಉಪಸಂಪಾದಕನಾಗಿ ಯುವ ಕವಿ, ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ಸಂಚಾಲಕರಾದ ಆಮಿರ್ ಅಶ್‌ಅರೀ ಆಯ್ಕೆಯಾಗಿದ್ದಾರೆ ಎಂದು ಉರುಮಾಲ್ ಪ್ರಕಾಶಕರು ಹಾಗೂ ವ್ಯವಸ್ಥಾಪಕರಾದ ಎಂ.ಸರ್ಫರಾಝ್ ಮಂಗಳಪೇಟೆ ತಿಳಿಸಿದ್ದಾರೆ.
Advertisement
ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರ ಕವಿತೆ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪಠ್ಯಪುಸ್ತಕದಲ್ಲಿ ಪಾಠವಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.