ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಡವಿಸೋಮಾಪೂರ ದೊಡ್ಡತಾಂಡೆ (ಜಲಾಶಂಕರ ನಗರ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 10ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ.
Advertisement
2025-26ನೇ ಸಾಲಿನಲ್ಲಿ ಮೊರಾರ್ಜಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಸದರಿ ಶಾಲೆಯ ಯೋಗೇಶ್ವರಿ ಕೃಷ್ಣಪ್ಪ ರಾಠೋಡ, ನಂದಿನಿ ಕೃಷ್ಣಪ್ಪ ಲಮಾಣಿ, ಶಾರನ್ನರಾಮದಾಸ ಲಮಾಣಿ, ಸಂಜಯ ರಮೇಶ ಲಮಾಣಿ, ದೀಪಕ ಗಣೇಶ ರಾಠೋಡ, ಭೂಮಿಕಾ ಕಾಂತೇಶ ಲಮಾಣಿ, ವಿಜಯಲಕ್ಷ್ಮೀ ಅನಿಲಕುಮಾರ ರಜಪೂತ, ನೇಹಾ ಸುಭಾಸ ಲಮಾಣಿ, ಸ್ನೇಹಾ ಹನಮಂತ ಕಾರಬಾರಿ, ಸ್ವಾತಿ ಶಿವಕುಮಾರ ರಜಪೂತ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ವೈ.ಎಸ್. ಅರ್ಕಸಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.