ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 2025-26ನೇ ಸಾಲಿನ ರಾಜ್ಯಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ಗದಗ ತಾಲೂಕಿನ ಕದಾಂಪುರದ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಹಾಗೂ ಪಾಪನಾಶಿಯ ಆಯುಷ್, ಆರೋಗ್ಯ ಮಂದಿರದ ಯೋಗಪಟು ಪೂರ್ಣಿಮ ಕಟಿಗ್ಗಾರ ಹಾಗೂ ಅಂತೂತ ಬೆಂತೂರಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿನಯಕುಮಾರ ಆಲೂರು ಭಾಗವಹಿಸಿ ಜೂನ್ 15ರಿಂದ 18ರವರೆಗೆ ಕನ್ಯಾಕುಮಾರಿಯಲ್ಲಿ ನಡೆಯುವ ರಾಷ್ಟçಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Advertisement
ಗದಗ ಜಿಲ್ಲೆಗೆ, ಪಾಪನಾಶಿ, ಕದಾಂಪುರ ಹಾಗೂ ಅಂತೂರ-ಬೆಂತುರ ಗ್ರಾಮಕ್ಕೆ ಕೀರ್ತಿ ತಂದಿರುವ ಸಾಧಕ ಯೋಗ ಪಟುಗಳಿಗೆ ಊರಿನ ಹಿರಿಯರು, ಜಿಲ್ಲಾ ಆಯುಷ್ ಅಧಿಕಾರಿ ಜಯಪಾಲ ಸಾಮುದ್ರೆಕರ, ವೈದ್ಯಾಧಿಕಾರಿಗಳಾದ ಡಾ. ಅಶೋಕ ಮತ್ತಿಗಟ್ಟಿ, ಯೋಗ ಶಿಕ್ಷಕಿ ಸುಧಾ ಪಾಟೀಲ, ಚೇತನ್ ಚುಂಚಾ ಮುಂತಾದವರು ಅಭಿನಂದಿಸಿದ್ದಾರೆ.