ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Advertisement
ಸಹನಾ ಬೇಗಂ ಗುಡಗೇರಿ 200 ಮೀ ಓಟದಲ್ಲಿ ಪ್ರಥಮ, ಅಡೆತಡೆ ಓಟದಲ್ಲಿ ತೃತೀಯ, ಹುಲಿಗೆವ್ವ ಗಾಜಿ 1500 ಮೀ ಓಟದಲ್ಲಿ ಪ್ರಥಮ, 3000 ಮೀ ಓಟದಲ್ಲಿ ತೃತೀಯ, ಸುಫಿಯಾ ಬೇಗಂ ಗುಡಗೇರಿ 400 ಮೀ ಓಟದಲ್ಲಿ ಪ್ರಥಮ, 100 ಮೀ ಓಟದಲ್ಲಿ ತೃತೀಯ, ರೋಹಿಣಿ ಹಿರೇಹಾಳ ಬಲ್ಲೆ ಎಸೆತದಲ್ಲಿ ಪ್ರಥಮ, ಲಕ್ಷ್ಮೀವ್ವ ಚೂರಗಸ್ತಿ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ, 400 ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕಿ ಜಯಶೀಲಾ ಜ್ಯೋತಿ ತಿಳಿಸಿದ್ದಾರೆ.


