ವಿಜಯಸಾಕ್ಷಿ ಸುದ್ದಿ, ಗದಗ: ಕಲಾ ವಿಕಾಸ ಪರಿಷತ್ತಿನ ‘ಕಲಾ ವಿಕಾಸ ಕನ್ನಡ ಸಿರಿ’ ಜೀವಮಾನದ ಶ್ರೇಷ್ಠ ಸಾಧನೆಯ ಪ್ರಶಸ್ತಿಗೆ ನಗರದ ನಿವೃತ್ತ ಉಪನ್ಯಾಸಕರು, ಸಾಹಿತಿಗಳು, ಸಂಸ್ಕೃತಿ ಚಿಂತಕರಾದ ಪ್ರೊ. ಅನ್ನದಾನಿ ಹಿರೇಮಠ, ಶಿಕ್ಷಣ ತಜ್ಞರು, ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಕಲಾಪೋಷಕರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಹಾಗೂ ಸಾಹಿತಿ ಮತ್ತು ಪತ್ರಕರ್ತರು, ವಿಭೂತಿ ಮಾಸಪತ್ರಿಕೆಯ ಸಂಪಾದಕರಾದ ಅಂದಾನೆಪ್ಪ ವಿಭೂತಿಯವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 14ರಂದು ಬೆಳಿಗ್ಗೆ 10 ಗಂಟೆಗೆ ಹಾತಲಗೇರಿ ರಸ್ತೆಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ಸಂಸ್ಥಾಪಕ ಸಿ.ಕೆ.ಹೆಚ್. ಶಾಸ್ತ್ರಿ (ಕಡಣಿ) ಹಾಗೂ ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಿ.ಕೆ. ಗುರುಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



