ವಿಜಯಸಾಕ್ಷಿ ಸುದ್ದಿ, ಗದಗ: ಯೋಗ ಫೆಡರೇಶನ್ ಆಫ್ ಇಂಡಿಯಾ ಪಂಚಕುಲ (ಹರ್ಯಾಣ) ಇವರು ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಂಗಳೂರು, ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಯೋಗ ಸ್ಪೋರ್ಟ್ಸ್ ಫೌಂಡೇಶನ್, ಗ್ಲೋಬಲ್ ಫೋರಂ ಮೈಸೂರು ಇವರುಗಳ ಸಹಯೋಗದಲ್ಲಿ 09-10-2025ರಿಂದ 12-10-2025ರವರೆಗೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ 50ನೇ ಹಿರಿಯರ ರಾಷ್ಟೀಯ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಭಾಗವಹಿಸಲು ಗದಗ ಜಿಲ್ಲೆಯಿಂದ ಯಶವಂತ ಮತ್ತೂರ (45 ವರ್ಷ ಮೇಲ್ಪಟ್ಟ ಪುರುಷರ ವಿಭಾಗ), ಸಂಜನಾ ವಿ. ಸಜ್ಜನರ (21 ರಿಂದ 25 ವರ್ಷದ ಮಹಿಳೆಯರ ವಿಭಾಗ) ಮತ್ತು ಕೆ.ಎಸ್. ಪ್ರಸಾದ್ (30 ವರ್ಷ ಮೇಲ್ಪಟ್ಟ ಪ್ರೊಫೆಶನಲ್ (ರೆಫರಿ) ವಿಭಾಗ) ಇವರು ರಾಜ್ಯಮಟ್ಟದಲ್ಲಿ ಸ್ಥಾನ ಗಳಿಸಿ ಆಯ್ಕೆಯಾಗಿದ್ದಾರೆ.
50ನೇ ರಾಷ್ಟೀಯ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುವ ಯೋಗಾಸನ ಕ್ರೀಡಾಪಟುಗಳಿಗೆ ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷರಾದ ಎಂ.ಎಸ್. ಶಿರಿಯಣ್ಣವರ, ಸದಸ್ಯರಾದ ಡಾ. ಎಂ.ವಿ. ಐಹೊಳ್ಳಿ, ಐ.ಬಿ. ಕೊಟ್ಟೂರಶೆಟ್ಟಿ, ವಿ.ಎಂ. ಮುಂದಿನಮನಿ, ವಿಜಯಲಕ್ಷ್ಮೀ ಆನೆಹೊಸೂರ, ಸುನಂದಾ ಜ್ಯಾನೋಪಂತರ ಮುಂತಾದವರು ಶುಭ ಹಾರೈಸಿದ್ದಾರೆ.



