ವಿಜಯಸಾಕ್ಷಿ ಸುದ್ದಿ, ಗದಗ: ಪದವಿಪೂರ್ವ ಕಾಲೇಜಿನ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮನೋರಾಮಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕರಾಟೆ ಸ್ಪರ್ಧೆಯಲ್ಲಿ ಕಿರಣಕುಮಾರ ಕೊಟ್ಟೂರಶೆಟ್ಟರ್ ಭಾಗವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
Advertisement
ಸಾಧಕ ವಿದ್ಯಾರ್ಥಿಗೆ ಸಂಸ್ಥೆಯ ಚೇರ್ಮನ್ ಎನ್.ಎಮ್. ಕುಡತರಕರ, ಕಾರ್ಯದರ್ಶಿ ಮಂಜುನಾಥ ಕುಡತರಕರ, ಪ್ರಾಚಾರ್ಯ ಬಿ.ಎಸ್. ಹೀರೆಮಠ, ಸಂಸ್ಥೆಯ ಆಡಳಿತಾಧಿಕಾರಿ ಕಿಶೋರ್ ಮುದಗಲ್ಲ, ಸಂಸ್ಥೆಯ ಖಜಾಂಚಿ ಸಂಜಯ ಕುಡತರಕರ, ನಿರ್ದೇಶಕ ಚೇತನ ಕುಡತರಕರ, ಸಂಯೋಜಕರಾದ ಪ್ರೊ. ಶಾಹಿದಾ ಶಿರಹಟ್ಟಿ, ದೈಹಿಕ ಉಪನ್ಯಾಸಕ ಖಯುಂ ನವಲೂರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.


