ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಪಟ್ಟಣದ ಅಂಜುಮನ್ ಎ-ಇಸ್ಲಾಂ ಸಂಸ್ಥೆಯ ನೂತನ ಜನ ಪದಾಧಿಕಾರಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಸ್ಥೆಯ ಮಾಜಿ ಅಧ್ಯಕ್ಷ ಸಿ.ಜಾಯಾದ್ ಅವರ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಉಪಾಧ್ಯಕ್ಷರಾಗಿ ವಗ್ಗಾಲಿ ಸಮಿವುಲ್ಲಾ, ಮಕ್ರಬ್ಬಿ ಜಬಿವುಲ್ಲಾ, ಕಾರ್ಯದರ್ಶಿಯಾಗಿ ಬಿ.ಮೆಹಬೂಬ್ ಸಾಬ್, ಸಹ ಕಾರ್ಯದರ್ಶಿಯಾಗಿ ಎಂ.ಕೆ. ಜಾವೀದ್, ಖಜಾಂಚಿಯಾಗಿ ಸಿರಾಜ್ ಆಯ್ಕೆಯಾಗಿದ್ದಾರೆ.
ಹಾಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎನ್.ಎಂ.ನೂರ್ ಅಹ್ಮದ್ ಅವರು ಪದಾಧಿಕಾರಿಗಳ ಆಯ್ಕೆಗೆ ಸಂಬಂಧಪಟ್ಟಂತೆ 18 ಜನ ಸದಸ್ಯರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರೂ ಸಹ ಯಾರೊಬ್ಬರೂ ಪದಾಧಿಕಾರಿಯಾಗಿ ಆಯ್ಕೆಯಾಗದ ಹಿನ್ನೆಲೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಅಂಜುಮಾನ್ ಸಂಸ್ಥೆಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಸದಸ್ಯರನ್ನು ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು. ನೂತನ ಪದಾಧಿಕಾರಿಗಳ ಆಯ್ಕೆಗೆ ಸಂಸ್ಥೆಯ ಸದಸ್ಯರಾದ ಎಸ್.ಕೆ. ಸಮಿಹುಲ್ಲಾ, ಬಿ ರಿಯಾಜ್ ಅವರು ಶ್ರಮಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಫಾತೀಮಾಬೀ ಶೇಕ್ಷಾವಲಿ, ಸದಸ್ಯ ಜಾಕೀರ್ ಹುಸೇನ್, ಜಿ.ಜಾವೀದ್, ರಿಯಾಜ್, ಜೀಷಾನ್, ಶಬೀರ ಸೇರಿದಂತೆ ಮತ್ತಿತರರಿದ್ದರು.