ವಿಜಯಸಾಕ್ಷಿ ಸುದ್ದಿ, ಗದಗ: ನವೆಂಬರ್ 14, 15ರಂದು ನಡೆಯಲಿರುವ 10ನೇ ಪುರುಷ ಹಾಗೂ ಮಹಿಳೆಯರ ರಾಷ್ಟ್ರಮಟ್ಟದ ಕ್ರೀಡಾಕೂಟವು ತೆಲಂಗಾಣ ರಾಜ್ಯದ ನಾಗಲಕುರಲ್‌ನಲ್ಲಿ ನಡೆಯಲಿದೆ. ಸದರಿ ಕ್ರೀಡಾಕೂಟದ ಅಟ್ಯಾ-ಪಟ್ಯಾ ಪಂದ್ಯಾಟಕ್ಕೆ ದಿ ಕರ್ನಾಟಕ ಕುರುಬರ ಸಂಘದ ಎಚ್.ವ್ಹಿ. ಕುರಡಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಕ್ಷಿೋಮ್ ವಸ್ತ್ರದ ಆಯ್ಕೆಯಾಗಿದ್ದಾಳೆ.
Advertisement
ಸಾಧಕ ವಿದ್ಯಾರ್ಥಿನಿಗೆ ಹಾಗೂ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಕ ಸಂತೋಷ ನಾಯಕ ಇವರಿಗೆ ಸಂಸ್ಥೆಯ ಗೌರವ ಕಾರ್ಯದರ್ಶಿ ವಾಸಣ್ಣ ಕುರಡಗಿ, ಶಾಲೆಯ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಶಾಲೆಯ ಮುಖ್ಯೋಪಾಧ್ಯಾಯರಾದ ಕುಬೇರಪ್ಪ ಕಲಾರಿ, ಶಾಲೆಯ ಸಮಸ್ತ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.


