ರಿಪಬ್ಲಿಕ್ ಡೇ ಕಾನ್ಟಿನಜೆಂಟ್ 2025ಕ್ಕೆ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮುದ್ರಣ ಕಾಶಿ ಗದುಗಿನ ವಿದ್ಯಾರ್ಥಿಯೋರ್ವ ಕರ್ನಾಟಕ ಹಾಗೂ ಗೋವಾ ರಿಪಬ್ಲಿಕ್ ಡೇ ಕಾನ್ಟಿನಜೆಂಟ್ 2025ಕ್ಕೆ ಆಯ್ಕೆಯಾಗಿದ್ದಾರೆ. ಪೊಲೀಸ್ ಪೇದೆ ಪ್ರಕಾಶ ಪಡಸಾಲಿಮನಿಯ ಸುಪುತ್ರ ಶ್ರೀನಿವಾಸ್ ಪ್ರಕಾಶ ಪಡಸಾಲಿಮನಿ ಕರ್ನಾಟಕ ಹಾಗೂ ಗೋವಾ ರಿಪಬ್ಲಿಕ್ ಡೇ ಕಾನ್ಟಿನಜೆಂಟ್ 2025ರ ಎನ್‌ಸಿಸಿ ಜಿಪಿ ಮಂಗಳೂರಿನ 5 KAR NAVAL Unit NCC ಸೀನಿಯರ್ ಡಿವಿಶನ್‌ನಲ್ಲಿ ನೇವಿ ವಿಂಗ್‌ಗೆ ಆಯ್ಕೆಯಾಗಿದ್ದಾರೆ.

Advertisement

ಶ್ರೀನಿವಾಸ್ ಪ್ರಕಾಶ ಪಡಸಾಲಿಮನಿಯವರಿಗೆ ಕಾಲೇಜು ಆಡಳಿತ ಮಂಡಳಿ, ಪಾಲಕರು ಹಾಗೂ ಕುಟುಂಬ ವರ್ಗದವರಾದ ಪ್ರಕಾಶ್ ವಾಸುದೇವ ಪಡಸಾಲಿಮನಿ, ಪ್ರೀತಿ ಪ್ರಕಾಶ್ ಪಡಸಾಲಿಮನಿ, ರೋಹಿಣಿ ಪ್ರಕಾಶ್ ಪಡಸಾಲಿಮನಿ, ವಾಸುದೇವ ಭಿಮಪ್ಪ ಪಡಸಾಲಿಮನಿ, ಶಕುಂತಲಾ ವಾಸುದೇವ ಪಡಸಾಲಿಮನಿ ಅಭಿನಂದನೆಗಳನ್ನು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here