ಯೋಗಾಸನ ಚಾಂಪಿಯನ್‌ ಶಿಪ್ ಸ್ಪರ್ಧೆಗೆ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯೋಗ ಫೆಡರೇಶನ್ ಆಫ್ ಇಂಡಿಯಾ ಪಂಚಕುಲ (ಹರ್ಯಾಣ) ಇವರು ಯೋಗ ಅಸೋಸಿಯೇಶನ್ ಆಫ್ ಕೇರಳ ಸಂಸ್ಥೆಯ ಸಹಯೋಗದಲ್ಲಿ ಫೆ.13ರಿಂದ 16ರವರೆಗೆ ಇಂಟರ್‌ನ್ಯಾಷನಲ್ ಅಕ್ವಿಟಿಕ್ ಕಾಂಪ್ಲೆಕ್ಸ್ ಪಿರಪಂಕೋಟ, ತಿರುವನಂತಪುರ (ಕೇರಳ)ದಲ್ಲಿ ನಡೆಸಲಿರುವ 49ನೇ ಹಿರಿಯರ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಭಾಗವಹಿಸಲು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ವಿದ್ಯಾರ್ಥಿ ಯಶವಂತ ಮತ್ತೂ (45 ವರ್ಷ ಮೇಲ್ಪಟ್ಟ ಪುರುಷರ ವಿಭಾಗ) ಬಸವ ಯೋಗ ಮಹಾವಿದ್ಯಾಲಯದ ವಿದ್ಯಾರ್ಥಿನಿ ಗೀತಾ ಗೋಡಿ (ಪೂಜಾರ) (45 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ) ಮತ್ತು ಕೆ.ಎಸ್. ಪಲ್ಲದ (30 ವರ್ಷ ಮೇಲ್ಪಟ್ಟ ಪ್ರೊಫೆಶನಲ್ (ರೆಫ್ರಿ) ವಿಭಾಗಗಳಿಗೆ ಆಯ್ಕೆಯಾಗಿದ್ದಾರೆ.

Advertisement

ಸ್ಪರ್ಧೆಗೆ ಆಯ್ಕೆಯಾಗಿರುವ ಗೀತಾ ಗೋಡಿ ಮತ್ತು ಕೆ.ಎಸ್. ಪಲ್ಲದ ಇಬ್ಬರಿಗೂ ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ಗದಗ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪರವಾಗಿ ಕಾರ್ಯದರ್ಶಿ ಚೇತನ ಚುಂಚಾ ಮತ್ತು ಯೋಗ ಪಾಠಶಾಲೆಯ ಆಡಳಿತ ಮಂಡಳಿ ಪರವಾಗಿ ಎಂ.ಎಸ್. ಅಂಗಡಿ, ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯ ಪರವಾಗಿ ಪ್ರೊ. ಎಸ್.ಎಸ್. ಪಟ್ಟಣಶೆಟ್ರ, ಹಳೆಯ ವಿದ್ಯಾರ್ಥಿ ಸಂಘದ ಪರವಾಗಿ ಐ.ಬಿ. ಕೊಟ್ಟೂರಶೆಟ್ಟಿ, ಎಂ.ಎಸ್. ಶಿರಿಯಣ್ಣವರ, ಡಾ. ಎಂ.ವ್ಹಿ. ಐಹೊಳ್ಳಿ ಮುಂತಾದವರು ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here