ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಬಳಗಾನೂರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಪ್ರಭುರಾಜ ಶರಣಪ್ಪಬಸಪ್ಪ ಗೂಳರಡ್ಡಿ, ಉಪಾಧ್ಯಕ್ಷರಾಗಿ ಹನಮಪ್ಪ ಚನ್ನಪ್ಪ ಗಾಣಿಗೇರ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಹಾಗೂ ಬಳಗಾನೂರ ಗ್ರಾಮದ ಬಿಜೆಪಿ ಹಿರಿಯ ಮುಖಂಡರಾದ ಶೇಖಪ್ಪ ಅಗಸಿಮನಿ ಮಾತನಾಡಿ, ಬಳಗಾನೂರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಸಕ್ತ ಸಾಲಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಕಳೆದ 1977ನೇ ಸಾಲಿನಲ್ಲಿ ಚುನಾವಣೆ ನಡೆದಿತ್ತು. ಸುಮಾರು 47 ವರ್ಷಗಳ ಬಳಿಕ ಪ್ರಸಕ್ತ ಸಾಲಿನಲ್ಲಿ ಚುನಾವಣೆ ನಡೆದಿರುವದು ಐತಿಹಾಸಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪ್ರಭುರಾಜ ಗೂಳರಡ್ಡಿ ಮಾತನಾಡಿ, ಪಕ್ಷದ ಮುಖಂಡರು ಹಾಗೂ ಸಂಘದ ಸದಸ್ಯರು ನನ್ನ ಮೇಲಿ ವಿಶ್ವಾಸವನ್ನಿಟ್ಟು ಅತ್ಯಂತ ದೊಡ್ಡ ಜವಾಬ್ದಾರಿಯನ್ನ ನೀಡಿದ್ದಾರೆ. ಅದಕ್ಕೆ ಚ್ಯುತಿ ಬಾರದಂತೆ ಎಲ್ಲ ಸದಸ್ಯರನ್ನು, ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ಹನಮಪ್ಪ ಗಾಣಿಗೇರ ಮಾತನಾಡಿ, ಪಕ್ಷದ ಹಿರಿಯರ ಮತ್ತು ಸಂಘದ ಸರ್ವ ಸದಸ್ಯರ ಸಲಹೆಯ ಮೇರೆಗೆ ಗ್ರಾಮದ ರೈತರ ಅಭಿವೃದ್ಧಿ ಕೆಲಸ ಮಾಡುತ್ತೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಶಂಕರಗೌಡ ಕಾಶೀಗೌಡ್ರ, ಶೇಖಪ್ಪ ಅಗಸಿಮನಿ, ಬಸನಗೌಡ ಪಾಟೀಲ, ಡಾ.ಶಿವಕುಮಾರ ಹಿರೇಮಠ, ನಿಂಗಪ್ಪ ಮಡಿವಾಳರ, ಹುಲ್ಲಪ್ಪ ಚಲವಾದಿ, ಸಂಗಪ್ಪ ಚವಡಿ, ತಿಪ್ಪಣ್ಣ ಕರಿಭರಮಣ್ಣವರ, ಸರೋಜವ್ವ ಕಡ್ಲಿ, ಮುತ್ತವ್ವ ಮಾಗುಂಡನವರ, ಬಿಜೆಪಿ ಹಿರಿಯ ಮುಖಂಡ ಚನ್ನಯ್ಯ ಶಾಂತಯ್ಯನಮಠ, ಗ್ರಾ.ಪಂ ಸದಸ್ಯರಾದ ಹನಮಪ್ಪ ಕಮಲ್ದಿನ್ನಿ, ಬಿಜೆಪಿ ಮುಖಂಡರಾದ ಶರಣಪ್ಪ ಚಟ್ರಿ, ಅಂದಪ್ಪ ಬೆಟಗೇರಿ, ಪರಸಪ್ಪ ಕರಡ್ಡಿ, ಹನಮರಡ್ಡಿ ಕರಡ್ಡಿ, ಪ್ರಕಾಶ ಮಡಿವಾಳರ, ಬಸವರಾಜ ಚಲವಾದಿ, ಮಂಜುನಾಥ ಪಾಟೀಲ, ದಾದಾಸಾಹೇಬ ಮುಲ್ಲಾ, ಇಸ್ಮಾಯಿಲಸಾಬ ಮುಲ್ಲಾ, ಶಶಿಧರ ಗೂಳರಡ್ಡಿ, ಬಸವರಾಜ ಚವಡಿ, ಮಂಜುನಾಥ ಆರಬಳ್ಳಿನ, ಮಕ್ತುಮಹುಸೇನ ಮುಲ್ಲಾ, ಪ್ರದೀಪ ಗಾಣಿಗೇರ, ಚಂದ್ರು ಕಲಕೇರಿ, ಹನಮಂತ ಚಲವಾದಿ, ಹನಮಂತ ನಡುವಿನಮನಿ, ಸುರೇಶ ಚಲವಾದಿ ಚುನಾವಣಾಧಿಕಾರಿ ಶಾಂತಾ ಎಂ.ಎಚ್, ಮುಖ್ಯ ಕಾರ್ಯದರ್ಶಿ ಅಪ್ಪಣ್ಣ ಶಿವನಪ್ಪನವರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಆರ್.ಎನ್. ಪಾಟೀಲ ಮಾತನಾಡಿ, ಗ್ರಾಮದಲ್ಲಿ ಸಂಘದ ಸದಸ್ಯರು ಹಿಂದಿನಿಂದಲೂ ಹಲವಾರು ರೈತಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಬಾರಿ ನರಗುಂದ ಮತಕ್ಷೇತ್ರದ ಶಾಸಕ ಸಿ.ಸಿ. ಪಾಟೀಲರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ ಎಂದು ಹೇಳಿದರು.