ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹಳೇ ಸರಾಫ್ ಬಜಾರದಲ್ಲಿರುವ ಶ್ರೀ ಜಗದಂಬಾ ದೇವಸ್ಥಾನದ ಶ್ರೀ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣಸಾ ಹಬೀಬ ಸಭಾಗೃಹದಲ್ಲಿ ಎಸ್‌ಎಸ್‌ಕೆ ಸಮಾಜದ ನೂತನ ಮಹಿಳಾ ಮಂಡಳವನ್ನು ರಚಿಸಲಾಯಿತು.
ಎಸ್‌ಎಸ್‌ಕೆ ಮಹಿಳಾ ಮಂಡಳದ ನೂತನ ಅಧ್ಯಕ್ಷರಾಗಿ ಉಮಾಬಾಯಿ ಬೇವಿನಕಟ್ಟಿ, ಉಪಾಧ್ಯಕ್ಷರಾಗಿ ಸ್ನೇಹಲತಾ ಕಬಾಡಿ, ಗೌರವ ಕಾರ್ಯದರ್ಶಿಯಾಗಿ ರೇಖಾ ಬೇವಿನಕಟ್ಟಿ, ಸಹ ಕಾರ್ಯದರ್ಶಿಯಾಗಿ ಗೀತಾ ಹಬೀಬ, ಖಜಾಂಚಿಯಾಗಿ ಕಸ್ತೂರಿಬಾಯಿ ಬಾಂಡಗೆ ಅವರನ್ನು ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಎಸ್‌ಎಸ್‌ಕೆ ಸಮಾಜದ ಮಹಿಳಾ ಮಂಡಳದ ಮಾಜಿ ಅಧ್ಯಕ್ಷೆ ರೇಖಾಬಾಯಿ ಖಟವಟೆ ಅವರು ನೂತನ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ ಅವರಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿ ನೂತನ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ ಮಾತನಾಡಿ, ಎಸ್‌ಎಸ್‌ಕೆ ಸಮಾಜವನ್ನು ಸಂಘಟಿಸಲು ಮಹಿಳೆಯರು ಮುಂದೆ ಬರಬೇಕು. ಸಮಾಜದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇಣುಕಾಬಾಯಿ ಕಲಬುರ್ಗಿ, ಸರೋಜಾಬಾಯಿ ಟಿಕಣದಾರ, ಸುನಂದಾ ಹಬೀಬ, ರತ್ನಾ ಹಬೀಬ, ಅನ್ನಪೂರ್ಣ ಶಿದ್ಲಿಂಗ, ವಂದನಾ ವಿನೋದ ಶಿದ್ಲಿಂಗ, ಸುನಂದಾ ಹಬೀಬ, ಲಕ್ಷ್ಮಿಬಾಯಿ ಖಟವಟೆ, ಅಂಬುಬಾಯಿ ಬೇವಿನಕಟ್ಟಿ, ಗೀತಾ ಬಾಂಡಗೆ, ಲಲಿತಾಬಾಯಿ ಬಾಕಳೆ, ಪದ್ಮಾ ಕಬಾಡಿ, ಅನ್ನಪೂರ್ಣ ಬಾಂಡಗೆ, ಭಾವನಾ ಬಾಂಡಗೆ, ಸುಶೀಲಾ ದಲಬಂಜನ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.



