ವಿಜಯಸಾಕ್ಷಿ ಸುದ್ದಿ, ಗದಗ : ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಶ್ರೀಮಠದ ಸದ್ಭಕ್ತರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಮ್ಮುಖದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎಚ್. ಬೇಲೂರ, ಉಪಾಧ್ಯಕ್ಷರಾಗಿ ನ್ಯಾಯವಾದಿಗಳು ಹಾಗೂ ಎಡೆಯೂರು ಕಮಿಟಿ ಮಾಜಿ ಅಧ್ಯಕ್ಷರಾದ ಶ್ರೀದೇವಿ ಶೆಟ್ಟರ್, ವರ್ತಕರಾದ ಶಿವಯ್ಯ ನಾಲ್ವತ್ವಾಡಮಠ, ಅಮರೇಶ ಚಾವಿ ಹಾಗೂ ಕಾರ್ಯದರ್ಶಿಯಾಗಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿಯಾಗಿ ಬರಕತ್‌ಅಲಿ ಮುಲ್ಲಾ, ಗವಿಸಿದ್ಧಪ್ಪ ಗಾಣಿಗೇರ, ಸಂಘಟನಾ ಕಾರ್ಯದರ್ಶಿಗಳಾಗಿ ತಿಮ್ಮರಡ್ಡಿ ಕೋನರಡ್ಡಿ, ಕೋಶಾಧ್ಯಕ್ಷರಾಗಿ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷರಾಗಿ ಅಜಯ ಮುನವಳ್ಳಿ ಆಯ್ಕೆಯಾದರು.
ಸಭೆಯಲ್ಲಿ ಕೆ.ಎಸ್. ಚಟ್ಟಿ, ಎಸ್.ಎಸ್. ಶೆಟ್ಟರ್, ಎಸ್.ಎಸ್. ಪಾಟೀಲ, ಎಸ್.ಎಸ್. ಕಳಸಾಪೂರ, ಬಾಲಚಂದ್ರ ಭರಮಗೌಡರ, ಸಿದ್ಧಣ್ಣ ಬಂಗಾರಶೆಟ್ರ, ವಿವೇಕಾನಂದಗೌಡ ಪಾಟೀಲ, ಕಳೆದ ಸಾಲಿನ ಜಾತ್ರಾ ಸಮಿತಿಯ ಪದಾಧಿಕಾರಿಗಳು, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ, ಎಂ.ಎಸ್. ಅಂಗಡಿ, ಎಲ್.ನಾರಾಯಣಸ್ವಾಮಿ, ಎಸ್.ಟಿ. ಪಾಟೀಲ, ಗಂಗಾಧರ ಹಿರೇಮಠ, ಅಮರೇಶ ಅಂಗಡಿ, ಜಿ.ಬಿ. ಪಾಟೀಲ, ಎಸ್.ಎಸ್. ಕವಳಿಕಾಯಿ, ವಿರುಪಣ್ಣ ಬಳ್ಳೊಳ್ಳಿ ಮುರುಗೇಶ ಬಡ್ನಿ, ಅನಿಲಕುಮಾರ ಬೆಳದಡಿ, ಸಿದ್ಧಲಿಂಗೇಶ ಚಳಗೇರಿ, ಮದರಿಮಠ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಆಶೀರ್ವದಿಸಿದರು.
ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಎಸ್ ಪಟ್ಟಣಶೆಟ್ಟರ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ಸಾಲಿನ ಜಾತ್ರಾ ಮಹೋತ್ಸವದ ಕೋಶಾಧ್ಯಕ್ಷರಾದ ಉಮೇಶ ನಾಲ್ವಾಡ ಲೆಕ್ಕಪತ್ರ ಮಂಡಿಸಿದರು. ಕಳೆದ ಸಾಲಿನ ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ. ಎಸ್.ಬಿ. ಶೆಟ್ಟರ್, ಡಾ. ಅನಂತ ಶಿವಪೂರ, ಎಂ.ಸಿ. ಐಲಿ, ಎಸ್.ಎನ್. ಬಳ್ಳಾರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.