ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ವೀರಶೈವ ಮಹಾಸಭಾ ಗದಗ ತಾಲೂಕಾ ಮಹಿಳಾ ಹಾಗೂ ಯುವ ಘಟಕದ ನೂತನ ಅಧ್ಯಕ್ಷರನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಮಹಿಳಾ ಘಟಕದ ಅಧ್ಯಕ್ಷರಾಗಿ ಲತಾ ಮುತ್ತಿನಪೆಂಡಿಮಠ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ಆನಂದ ಗೌಳಿ ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಲಕ್ಷಿö್ಮÃ ಶಶಿಧರ ಕಟ್ಟಿಮನಿ (ಹಡಪದ ಸಮಾಜ), ಅಕ್ಕಮ್ಮ ರುದ್ರಪ್ಪ ಅಣ್ಣಿಗೇರಿ (ಗಾಣಿಗ ಸಮಾಜ), ಸಾವಿತ್ರಿ ಗಂಗಾಧರ ಹೂಗಾರ (ಹೂಗಾರ ಸಮಾಜ), ಗೀತಾ ಬಾಳು ಭೈರವಾಡಿ (ಗೌಳಿ ಸಮಾಜ), ಸುಲೋಚನಾ ಮಲ್ಲಿಕಾರ್ಜುನ ಐಹೊಳ್ಳಿ (ಶಿವಸಿಂಪಗಿ ಸಮಾಜ) ಇವರುಗಳನ್ನು ಆಯ್ಕೆ ಮಾಡಲಾಯಿತು ಎಂದು ತಾಲೂಕ ಘಟಕದ ಅಧ್ಯಕ್ಷ ಮಹೇಶ ಕೋಟಿ ತಿಳಿಸಿದ್ದಾರೆ.
ಮಹಾಸಭಾದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ತಾಲೂಕಾ ಘಟಕದ ಉಪಾಧ್ಯಕ್ಷ ಚನ್ನಬಸಪ್ಪ ಅಕ್ಕಿ ಉಸ್ತುವಾರಿಗಳಾದ ವಿಜಯಕುಮಾರ ಮುತ್ತಿನಪೆಂಡಿಮಠ, ಶಿವರಾಜ ಹಿರೇಮನಿಪಾಟೀಲ ಹಾಗೂ ತಾಲೂಕು ಕಮಿಟಿಯ ಎಲ್ಲ ನಿರ್ದೇಶಕರ ಸೂಚನೆಯ ಮೇರೆಗೆ ಅಧ್ಯಕ್ಷ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದ್ದು, ಎರಡೂ ಸಮಿತಿಯ ಅಧ್ಯಕ್ಷರುಗಳು ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲು ಅಧಿಕಾರ ನೀಡಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಮಹೇಶ ಕೋಟಿ ತಿಳಿಸಿದ್ದಾರೆ.