ವಿಜಯಸಾಕ್ಷಿ ಸುದ್ದಿ, ನರಗುಂದ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗದಗ ಘಟಕದ ಆಶ್ರಯದಲ್ಲಿ ನರಗುಂದ ವಿಧಾನಸಭಾ ಕ್ಷೇತ್ರ ಪ್ರತಿನಿಧಿಗಳನ್ನು ಚುನಾಯಿಸಲಾಯಿತು.
Advertisement
ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಪಿಐ ಗದಗ ಜಿಲ್ಲಾ ಉಸ್ತುವಾರಿ ರಮಜಾನ ಕಡಿವಾಲ ವಹಿಸಿದ್ದರು. ಒಟ್ಟು 20 ನಾಮ ನಿರ್ದೇಶಿತ ಪ್ರತಿನಿಧಿಗಳಲ್ಲಿ 9 ಜನರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಗದಗ ಜಿಲ್ಲಾ ಎಸ್‌ಡಿಪಿಐ ಕಾರ್ಯದರ್ಶಿ ಖ್ವಾಜಾಮೈನುದ್ದಿನ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನರಗುಂದ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷರಾಗಿ ದಾವಲಸಾಬ ರಾಜೇಖಾನ, ಉಪಾಧ್ಯಕ್ಷರಾಗಿ ಖಲಂದರ ಸಕಲಿ, ಪ್ರಧಾನ ಕಾರ್ಯದಶಿಯಾಗಿ ಇಮ್ರಾನ ಅತ್ತಾರ, ಖಜಾಂಚಿಯಾಗಿ ಜಮಾಲಸಾಬ ಮುಲ್ಲಾ, ಸಹ ಕಾರ್ಯದಶಿಯಾಗಿ ಜವಾದ ಮುಲ್ಲಾ, ಸದಸ್ಯರಾಗಿ ಮೆಹಬೂಬ ಮಕಾಂದಾರ, ಅಶರಫ ನವಲಗುಂದ, ಇಮ್ರಾನ ಮುನವಳ್ಳಿ, ಸಿಕಂದರ ಇವರನ್ನು ಚುಣಾಯಿತ ಪ್ರಧಿನಿದಿಗಳಾಗಿ ಘೋಷಿಸಲಾಯಿತು.