ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಆದೇಶದಂತೆ ಮಹಾಸಭಾದ ಗದಗ ಜಿಲ್ಲಾ ಘಟಕವು ಗದಗ ಜಿಲ್ಲೆಯಲ್ಲಿ ಮಹಿಳಾ ಮತ್ತು ಯುವ ಘಟಕಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಸನ್ನದ್ಧಗೊಂಡಿದೆ.
Advertisement
ಮಹಾಸಭಾದ ಧ್ಯೇಯೋದ್ದೇಶಗಳನ್ನು ಅನುಸರಿಸಿ, ಸಮಾಜಮುಖಿಯಾಗಿ ಹಾಗೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಇಚ್ಛಿಸುವ 35 ವರ್ಷದೊಳಗಿನ ಉತ್ಸಾಹಿ ಮಹಿಳೆಯರು, ಯುವಕರು ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ (ಮೊ- 9945037111) ಅವರನ್ನು ಆಗಸ್ಟ್ 1ರೊಳಗೆ ಸಂಪರ್ಕಿಸಲು ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ತಿಳಿಸಿದ್ದಾರೆ.
ಮಹಾಸಭಾದ ಆಜೀವ ಸದಸ್ಯರಿದ್ದವರಿಗೆ ಮೊದಲ ಆದ್ಯತೆ ನೀಡಲಾಗುವದು. ಆಜೀವ ಸದಸ್ಯರಲ್ಲದವರ ಸದಸ್ಯತ್ವ ಪಡೆದು ಆಯ್ಕೆ ಪ್ರಕ್ರಿಯೆಗೆ ಕ್ರಮ ಜರುಗಿಸಲಾಗುವದು ಎಮದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.