ಉಡುಪಿ :– ನವಜಾತ ಶಿಶು ಮಾರಾಟ ಮಾಡಿದ್ದ ಆರೋಪದಡಿ ವೈದ್ಯೆ ಸೇರಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ವೈದ್ಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವೈದ್ಯ ಡಾ.ಸೋಮೇಶ್ ಸೋಲೋಮನ್, ಮಧ್ಯವರ್ತಿ ಮಹಿಳೆ ವಿಜಯಲಕ್ಷ್ಮಿ ಹಾಗೂ ಅತ್ಯಾಚಾರ ಆರೋಪಿ ನವನೀತ್ ನಾರಾಯಣ ಎಂದು ಗುರುತಿಸಲಾಗಿದೆ.
Advertisement
ಈ ಕುರಿತು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಉಡುಪಿಯ ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂಗನವಾಡಿಯಲ್ಲಿ ಪೋಷಣ್ ಟ್ರ‍್ಯಾಕರ್ ರಿಜಿಸ್ಟರ್ ಸಂದರ್ಭದಲ್ಲಿ ಈ ಮಗು ದಂಪತಿಗಳದ್ದಲ್ಲ ಎನ್ನೋದು ತಿಳಿದು ಬಂದಿದೆ ಎಂದು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರಿಗೆ ಮಗು ಮಾರಾಟ ಜಾಲ ಪತ್ತೆಯಾಗಿದೆ. ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.