ಬೆಂಗಳೂರು:- ಹಗಲಲ್ಲಿ ತಳ್ಳೋ ಗಾಡಿಯಲ್ಲಿ ಬಿರಿಯಾನಿ ಮಾರಾಟ ಮಾಡಿ ರಾತ್ರಿಯಾದ್ರೆ ಸಾಕು ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಮನುಕುಮಾರ್, ಸಚಿನ್ ಬಂಧಿತ ಆರೋಪಿಗಳು. ಇವರು ಅಕ್ಕ-ತಂಗಿಯರನ್ನು ಮದುವೆ ಆಗಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು, ಕಳೆದ ಹತ್ತು ವರ್ಷದಿಂದ ಬಿರಿಯಾನಿ ಮಾರಿಕೊಂಡಿದ್ದರು. ಕತ್ತಲಾದ್ರೆ ಸಾಕು ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್, ಡ್ಯೂಕ್ ಬೈಕುಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಹೆಂಡತಿಯರ ಜೊತೆ ಮೋಜು-ಮಸ್ತಿಗಾಗಿ ಬೈಕ್ ಕಳ್ಳತನದ ಹಾದಿ ಹಿಡಿದಿದ್ರು.
ಗಂಡಂದಿರು ಕಳ್ಳರು ಅಂತಾ ಗೊತ್ತಿದ್ರು ಸಹ ಹೆಂಡತಿಯರು ಎಂಜಾಯ್ ಮಾಡ್ತಿದ್ದರು ಸದ್ಯ ಆರೋಪಿಗಳನ್ನು ಬಂಧಿಸಿ 37 ಲಕ್ಷ ಮೌಲ್ಯದ 20 ಬೈಕ್ ಸೀಜ್ ಮಾಡಿದ್ದಾರೆ. ಬಂಧಿತರ ಮೇಲೆ ರಾಮಮೂರ್ತಿ, ಮಹದೇವಪುರ, ಹೆಚ್ ಎ ಎಲ್, ವೈಟ್ ಫೀಲ್ಡ್ ನಲ್ಲಿ ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ.



