ಇರಾನ್/ಟೆಹ್ರಾನ್: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ ನಂತರ, ಮಧ್ಯಂತರ ಸರ್ವೋಚ್ಚ ನಾಯಕತ್ವಕ್ಕೆ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ನೇಮಕಗೊಂಡಿದ್ದಾರೆ.
ಖಮೇನಿಯವರ ಮೃತ್ಯು ಬಳಿಕ ಶಾಶ್ವತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗುವವರೆಗೆ, ಮಧ್ಯಂತರ ಮಂಡಳಿಯು ರಾಜ್ಯದ ಎಲ್ಲಾ ಅಧಿಕಾರಗಳನ್ನು ಚಲಾಯಿಸುತ್ತಿದೆ. ಈ ಮಂಡಳಿಯು ನ್ಯಾಯಶಾಸ್ತ್ರಜ್ಞ ಸದಸ್ಯರು ಮತ್ತು ಧರ್ಮಗುರುಗಳೊಂದಿಗೆ ದೇಶದ ರಾಜಕೀಯ, ಧಾರ್ಮಿಕ ಹಾಗೂ ಸೈನಿಕ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ.
1989ರಿಂದ ಇರಾನ್ ಸರ್ವೋಚ್ಚ ನಾಯಕರಾಗಿ ಅಧಿಕಾರ ಹೊಂದಿದ್ದ 86 ವರ್ಷದ ಖಮೇನಿ ಅಮೆರಿಕ–ಇಸ್ರೇಲ್ ಜಂಟಿ ಏರ್ಸ್ಟ್ರೈಕ್ನಲ್ಲಿ ಬಲಿಯಾಗಿದ್ದಾರೆ. ಅವರ ಸಾವಿನಿಂದಾಗಿ ದೇಶದ ರಾಜಕೀಯ ಹಾಗೂ ಅಂತಾರಾಷ್ಟ್ರೀಯ ಸ್ಥಿತಿ ತೀವ್ರ ತಳಮಳಕ್ಕೆ ಒಳಗಾಗಿದೆ.



