ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಲ್ಲಿನ ಬ್ರಾಹ್ಮಣ ಸಂಘದ ವತಿಯಿಂದ ಹಿರಿಯ ವೈದ್ಯರಾದ ಐ.ಸಿ. ಪಾಟೀಲರಿಗೆ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಮುಳಗುಂದ ಘಟಕದ ಅಧ್ಯಕ್ಷರು ವಹಿಸಿದ್ದರು. ಉಪಾಧ್ಯಕ್ಷ ಶ್ರೀಪಾದನಾಯ್ಕ ತಮ್ಮಣ್ಣವರ (ಚಿನಿವಾಲರ) ಮಾತನಾಡಿ, ಐ.ಸಿ. ಪಾಟೀಲರು ವೈದ್ಯಕೀಯ ವೃತ್ತಿಯನ್ನು ಕಾರ್ಯತತ್ಪರತೆಯಿಂದ ನಿಭಾಯಿಸಿ, ಬಡವ-ಬಲ್ಲಿದರೆನ್ನದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಂಡುಕೊಂಡು ಬಂದವರು. ಸೇವೆಯೇ ಮುಖ್ಯವೆಂದು ಪರಿಗಣಿಸಿ ಜನಮನ ಗೆದ್ದವರು ಎಂದು ಅಭಿಪ್ರಾಯಪಟ್ಟರು.
ಮುಳಗುಂದ ಮಹಿಳಾ ಘಟಕ ಹಾಗೂ ಬ್ರಾಹ್ಮಣ ಸಂಘದ ವತಿಯಿಂದ ಪಾಟೀಲ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿ.ಕೆ. ಕುರಂದವಾಡ, ವಿ.ಡಿ. ದೇಸಾಯಿ, ಬಿ.ಎಸ್. ಕುಲಕರ್ಣಿ, ಸಿ.ಎಸ್. ಕುಲಕರ್ಣಿ, ನಾಗೇಶ ಬೇಗೂರ, ನರಸಿಂಹ ಸೊರಟೂರ, ಎಂ.ಕೆ. ಜಂತ್ಲಿ, ಸಂದೇಶ ಕುಲಕರ್ಣಿ, ಪ್ರಮೋದ ಡಂಬಳ, ಶ್ರೀಕಾಂತ ಗುಡಿ, ಗೋಪಾಲ ಗುಡಿ, ಪ್ರಭಾಕರ ಕುಲಕರ್ಣಿ ಚಿಂಚಲಿ ಸೇರಿದಂತೆ ಮಹಿಳಾ ಮಂಡಳದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಬರುವ ತಿಂಗಳು ಜರುಗಲಿರುವ ಶ್ರೀ ಗುರುಸಾರ್ವ ಭೌಮ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸುವ ಕುರಿತುಚರ್ಚಿಸಲಾಯಿತು.
ಪ್ರಮೋದನಾಯಕ ಶಂ.ತಮ್ಮಣ್ಣವರ ಇವರು ಸೊಲ್ಲಾಪೂರ ನಗರದ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬ್ರಾಹ್ಮಣ ಸಮಾಜದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಕುರಿತು ಬ್ರಾಹ್ಮಣ ಬಿಸನೆಸ್ ನೆಟ್‌ವರ್ಕನ್ನು ಪ್ರಾರಂಭಿಸಿದ್ದು, ಅವರನ್ನು ಅಭಿನಂದಿಸಲಾಯಿತು. ಸುನೀತಾ ಗುಡಿ ಕಾರ್ಯಕ್ರಮ ನಿರೂಪಿಸಿದರು.