ಧಾರವಾಡ:- ಹಿರಿಯ ಸಾಹಿತಿ ಡಾ. ರಮಾಕಾಂತ ಜೋಶಿ ಅವರು ಇಂದು ವಿಧಿವಶರಾಗಿದ್ದಾರೆ. ನಾಳೆ ಬೆಳಿಗ್ಗೆ 10.00 ಗಂಟೆಗೆ ಧಾರವಾಡ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬೆಳಿಗ್ಗೆ 09.00 ರಿಂದ 10.00 ರ ವರೆಗೆ ಧಾರವಾಡದ ಮಂಗಳವಾರ ಪೇಟೆ, ಮೆಣಸಿನಕಾಯಿ ಓಣಿಯ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಇವರು ಗುಜರಾತಿನ ಆನಂದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿಹೆಚ್ಡಿ ಪದವಿ ಪಡೆದಿದ್ದರು. ರಮಾಕಾಂತ ಜೋಶಿಯವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. ಹಲವಾರು ಗ್ರಂಥಗಳ ಸಂಪಾದನೆ ಮಾಡಿದ್ದರು ಮತ್ತು ಅನುವಾದ ಕಾರ್ಯವನ್ನು ಸಹ ಮಾಡಿದ್ದರು. ದೀನಾನಾಥ ಮಲ್ಹೋತ್ರಾ ಅವರು ಇಂಗ್ಲಿಷಿನಲ್ಲಿ ಬರೆದ BOOK PUBLISHING ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ಅದೊಂದು ಅತ್ಯಂತ ಪ್ರಮುಖ ಕೃತಿ ಎನಿಸಿಕೊಂಡಿದೆ.
ಧಾರವಾಡದ ಪ್ರಸಿದ್ಧ ಮನೋಹರ ಗ್ರಂಥಮಾಲಾ ಸಂಪಾದಕ, ವ್ಯವಸ್ಥಾಪಕಾಗಿದ್ದ ಜೋಶಿ ಅವರು ಆರಂಭದಲ್ಲಿ ಕಿಟೆಲ್ ಕಾಲೇಜ್ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಗ್ರಂಥಗಳ ಸಂಪಾದನೆ, ರಚನೆ, ಇಂಗ್ಲಿಷ್ನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದರು.