HomeKarnataka Newsಒಂದೇ ಕುಟುಂಬದಲ್ಲಿ ಸರಣಿ ಸಾವು: ಆತಂಕದಲ್ಲಿ ಊರನ್ನೇ ಬಿಟ್ಟು ಹೋಗುತ್ತಿರುವ ಜನ!

ಒಂದೇ ಕುಟುಂಬದಲ್ಲಿ ಸರಣಿ ಸಾವು: ಆತಂಕದಲ್ಲಿ ಊರನ್ನೇ ಬಿಟ್ಟು ಹೋಗುತ್ತಿರುವ ಜನ!

For Dai;y Updates Join Our whatsapp Group

Spread the love

ಚಿತ್ರದುರ್ಗ:- ಒಂದೇ ಕುಟುಂಬದಲ್ಲಿ ಸರಣಿ ಸಾವು ಕಂಡು ಗ್ರಾಮದ ಜನ ಬೆಚ್ಚಿ ಬಿದ್ದಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಮರ್ಲಹಳ್ಳಿ ಗ್ರಾಮದಲ್ಲಿ ಜರುಗಿದೆ.

ವರ್ಷಕ್ಕೊಬ್ಬರಂತೆ ನಾಲ್ಕೈದು ಮಂದಿ ಸರಣಿ ಸಾವನ್ನಪ್ಪುತ್ತಿದ್ದು, ಸಾವಿನ ಭೀತಿಯಿಂದ ಸುತ್ತಮುತ್ತಲಿನ ಮನೆಯವರು ಬೀಗ ಜಡಿದು ಮನೆ ಖಾಲಿ ಮಾಡಿದ್ದಾರೆ. ಕಳೆದ ಶನಿವಾರ ಗ್ರಾಮದ ಗಂಟ್ಲಯ್ಯ & ಚಿನ್ನಕ್ಕ ಪುತ್ರಿ 14 ವರ್ಷದ ಬಾಲಕಿ ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದರು. ಬಾಲಕಿ ನಿಗೂಢ ಸಾವಿನಿಂದ ಏರಿಯಾದ ಜನತೆ ಬೆಚ್ಚಿ ಬಿದ್ದಿದ್ದಾರೆ.

ಬಾಲಕಿ ಆತ್ಮಹತ್ಯೆ ಬಳಿಕ ಪೊಲೀಸರಿಗೂ ಮಾಹಿತಿ ನೀಡದೇ ಕುಟುಂಬಸ್ಥರು ಸಮಾಧಿ ಮಾಡಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದಾರೆ. ಅಂತ್ಯಕ್ರಿಯೆ ಮಾಡಿದ್ದ ಬಾಲಕಿಯ ಶವ ಹೊರ ತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಒಂದೇ ಫ್ಯಾಮಿಲಿಯಲ್ಲಿ ನಡೆದ ಸರಣಿ ಸಾವಿನಿಂದ ಏರಿಯಾದ ಜನರಲ್ಲೂ ಆತಂಕ ಶುರುವಾಗಿದೆ. ಈ ಹಿಂದೆಯೇ ಮನೆ ಖಾಲಿ ಮಾಡಿ ಎಂದು ಈ ಕುಟುಂಬಕ್ಕೆ ಊರಿನ ಕೆಲವರು ಹೇಳಿದ್ದರು. ಪುತ್ರಿ ಸಾವಿನ ಬಳಿಕ ಮನೆ ಖಾಲಿ ಮಾಡಿ ಕುಟುಂಬ ತೋಟ ಸೇರಿಕೊಂಡಿದೆ. ವರ್ಷಕ್ಕೆ ಒಬ್ಬರಂತೆ ಸರಣಿ ಸಾವಿನಿಂದ ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ.

ಬಾಲಕಿ ನಿಗೂಢ ಸಾವಿನಿಂದ ಗ್ರಾಮದಲ್ಲಿ ಇನ್ನಷ್ಟು ಆತಂಕ ಮೂಡಿದ್ದು, ಸ್ಥಳಕ್ಕೆ ಮೊಳಕಾಲ್ಮೂರು ಸಿಪಿಐ ವಸಂತ ಅಸೋಡೆ, ಪಿಐಎಸ್ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!