ಪೊಲೀಸರ ಹಲ್ಲೆಯಿಂದ ವ್ಯಕ್ತಿ ಸಾವು: ಕೋಣನಕುಂಟೆ ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ!

0
Spread the love

ಬೆಂಗಳೂರು:- ಪೊಲೀಸರ ಹಲ್ಲೆಯಿಂದ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಜರುಗಿದ್ದು, ಕೋಣನಕುಂಟೆ ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ.

Advertisement

ಜಮೀನು ವ್ಯಾಜ್ಯ ಸಂಬಂಧ ರಾಮಸ್ವಾಮಿ ಎಂಬ ವ್ಯಕ್ತಿಯನ್ನು ಕೋಣನಕುಂಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಪಾಪಣ್ಣ ಹಲ್ಲೆ ನಡೆಸಿದ್ದರು. ಇದೀಗ ವ್ಯಕ್ತಿ ಮೃತಪಟ್ಟಿದ್ದು ಇನ್ಸ್‌ಪೆಕ್ಟರ್ ಪಾಪಣ್ಣ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮೃತ ರಾಮಸ್ವಾಮಿ ಪತ್ನಿ ಮುನಿಯಮ್ಮ ಅವರು ಗಂಭೀರ ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ.

ಕೊತ್ತನೂರಿನಲ್ಲಿ ರಾಮಸ್ವಾಮಿ‌ ಮತ್ತು ನಿರ್ಮಿತಿ ಕೇಂದ್ರದ ನಡುವೆ ಜಮೀನು ವ್ಯಾಜ್ಯ ಇದೆ. 2 ತಿಂಗಳ ಹಿಂದೆ ಈ‌ ಜಮೀನಿನಲ್ಲಿ ನೀಲಗಿರಿ ಮರ ತೆರವು ಮಾಡಲು ನಿರ್ಮಿತಿ‌ ಕೇಂದ್ರದ ಸಿಬ್ಬಂದಿ ಹೋಗಿದ್ದರು. ಕೋಣನಕುಂಟೆ ಪೊಲೀಸರ ಭದ್ರತೆ ಜೊತೆಗೆ ಮರ ತೆರವು ಮಾಡಲು ಹೋಗಿದ್ದರು.

ಈ ವೇಳೆ ಜಮೀನು‌ ನಮ್ಮದು ಎಂದು ರಾಮಸ್ವಾಮಿ ಕುಟುಂಬ ಅಡ್ಡಿಪಡಿಸಿತ್ತು. ಆದರೆ ಇದೇ ಜಗಳ‌ದ ಮಧ್ಯೆ ಪೊಲೀಸರು ರಾಮಸ್ವಾಮಿ‌, ಆಕೆ ಪತ್ನಿ, ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇನ್ಸ್‌ಪೆಕ್ಟರ್ ಪಾಪಣ್ಣ ಮತ್ತು ಸಿಬ್ಬಂದಿ ಹಲ್ಲೆ ನಡೆಸಿದ್ದು ಬಳಿಕ ರಾಮಸ್ವಾಮಿ ಮತ್ತು ಮಗಳನ್ನ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಬಿಪಿ, ಶುಗರ್ ಇದ್ದ ರಾಮಸ್ವಾಮಿ ಹಲ್ಲೆಯಿಂದ ನಿತ್ರಾಣರಾಗಿದ್ದರು. ಪೊಲೀಸರೇ ರಾಮಸ್ವಾಮಿಯನ್ನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ರು. ನಂತರ ರಾಮಸ್ವಾಮಿ ಅವರ ಪತ್ನಿ ಹಾಗೂ ಮಗಳ ಬಳಿ ಬಂದು ಪೊಲೀಸರು ಬೆದರಿಕೆ ಹಾಕಿದ್ದಾರೆ. ನ್ಯಾಯಾಧೀಶರ ಮುಂದೆ ಹಲ್ಲೆ ವಿಚಾರ ಹೇಳಿದರೆ ಮಗಳನ್ನ ಶಾಶ್ವತವಾಗಿ ಜೈಲಿಗೆ ಕಳಿಸೋದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಇಷ್ಟೆಲ್ಲದರ ನಂತರ ನ್ಯಾಯಾಧೀಶರ ಮುಂದೆ ನಿಂತಾಗ ರಾಮಸ್ವಾಮಿ ಕುಸಿದು ಬಿದ್ದಿದ್ದರು. ನಂತರ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನಂತರ ಮನೆಗೆ ಮರಳಿದ್ದ ರಾಮಸ್ವಾಮಿ ಅವರು 3 ದಿನದ ಹಿಂದೆ ಮೃತಪಟ್ಟಿದ್ದಾರೆ.

ಆದ್ರೆ ಪತಿ ಮೃತರಾಗಿದ್ದು ಪೊಲೀಸರ ಹಲ್ಲೆಯಿಂದ ಎಂದು ಪತ್ನಿ ಆರೋಪ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗೆ, ಪೊಲೀಸ್ ಆಯುಕ್ತರಿಗೆ ರಾಮಸ್ವಾಮಿ ಪತ್ನಿ ಮುನಿಯಮ್ಮ ದೂರು ನೀಡಿದ್ದಾರೆ. ಪತಿ ಸಾವಿಗೆ ಕೋಣನಕುಂಟೆ ಇನ್ಸ್‌ಪೆಕ್ಟರ್ ಪಾಪಣ್ಣನೇ ಕಾರಣ ಎಂದು ಆರೋಪ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here