HomeEntertainmentಮೋಹನ್​ ಲಾಲ್ ನಟನೆಯ ‘ತುಡರುಂ’ ಸಿನಿಮಾದ ಮೇಲೆ ಕೇಳಿ ಬಂತು ಗಂಭೀರ ಆರೋಪ

ಮೋಹನ್​ ಲಾಲ್ ನಟನೆಯ ‘ತುಡರುಂ’ ಸಿನಿಮಾದ ಮೇಲೆ ಕೇಳಿ ಬಂತು ಗಂಭೀರ ಆರೋಪ

For Dai;y Updates Join Our whatsapp Group

Spread the love

ಮಲಯಾಳಂ ಸ್ಟಾರ್ ನಟ ಮೋಹನ್‌ ಲಾಲ್‌ ನಟನೆಯ ‘ತುಡರುಂ’ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಏಪ್ರಿಲ್ 25 ರಂದು ಬಿಡುಗಡೆ ಆಗಿದ್ದ ಈ ಸಿನಿಮಾಗೆ ಪ್ರೇಕ್ಷಕರು ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಿರುವಾಗಲೇ ಇದೀಗ ಸಿನಿಮಾದ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿರುವ ನಿರ್ದೇಶಕ ಸನಲ್ ಕುಮಾರ್ ಸಸಿಧರನ್, ತನ್ನ ‘ಥಿಯಟ್ಟಮ್’ ಸಿನಿಮಾದ ಚಿತ್ರಕತೆಯನ್ನು ಕದ್ದು ‘ತುಡರುಂ’ ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸನಲ್ ಕುಮಾರ್ ಸಸಿಧರನ್, ಹೇಳಿರುವಂತೆ ಅವರು ‘ಥಿಯಟ್ಟಮ್’ ಸಿನಿಮಾದ ಕತೆಯನ್ನು 2020 ರಲ್ಲಿ ಬರೆದಿದ್ದರಂತೆ. ಆದರೆ ಅನಿವಾರ್ಯ ಕಾರಣಗಳಿಂದ ಇನ್ನೂ ಸಿನಿಮಾ ಮಾಡಲಾಗಿಲ್ಲ. ಇದೀಗ ಇದೇ ಕಥೆಯನ್ನು ಇಟ್ಟುಕೊಂಡು ತುಡರಂ ಸಿನಿಮಾ ಮಾಡಲಾಗಿದೆ ಎಂದು ಆರೋಪಿದ್ದಾರೆ.

‘ತುಡರುಂ’ ಸಿನಿಮಾದ ಮೂಲ ಕತೆ, ಐಡಿಯಾ ತನ್ನ ಚಿತ್ರಕತೆಯನ್ನು ಹೋಲುತ್ತದೆ. ಆದರೆ ಕದ್ದಿರುವುದು ಗೊತ್ತಾಗಬಾರದೆಂದು ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ನನ್ನ ಸಿನಿಮಾದ ಮೂಲ ಭಾವವನ್ನು ಕದಿಯಲು ಅವರು ವಿಫಲರಾಗಿದ್ದಾರೆ. ಅವರಿಗೆ ಅಷ್ಟು ಬುದ್ಧಿವಂತಿಕೆ ಇಲ್ಲ ಅನಿಸುತ್ತದೆ’ ಎಂದಿದ್ದಾರೆ.

‘ಚಿತ್ರಕತೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರೂ ಸಹ ಕೆಲವು ಪ್ರಮುಖ ಡೈಲಾಗ್​ಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ನಾನು ಬರೆದ ಚಿತ್ರಕತೆಯಲ್ಲಿ ‘ಕೊನ್ನಾಲ್ ಪಾಪಂ ತಿನ್ನಾಲ್ ತೀರುಂ’ ಡೈಲಾಗ್ ಅತ್ಯಂತ ಮಹತ್ವದ್ದಾಗಿದೆ. ಅದೇ ಡೈಲಾಗ್ ಅನ್ನು ‘ತುಡರುಂ’ ಸಿನಿಮಾನಲ್ಲಿಯೂ ಉಳಿಸಿಕೊಳ್ಳಲಾಗಿದೆ. ಎಷ್ಟೇ ಬುದ್ಧಿವಂತ ಕಳ್ಳನಾದರೂ ಸಾಕ್ಷಿ ಉಳಿಸುತ್ತಾನೆ. ಹಾಗೆಯೇ ಇಲ್ಲೂ ಸಹ ಆ ಒಂದು ಡೈಲಾಗ್​​ನಿಂದ ಅವರು ಸಿಕ್ಕಿಹಾಕಿಕೊಂಡಿದ್ದಾರೆ’ ಎಂದು ಸನಲ್ ಕುಮಾರ್ ಸಸಿಧರನ್ ಬರೆದುಕೊಂಡಿದ್ದಾರೆ.

ಜನ ಈ ಎರಡೂ ಸಿನಿಮಾವನ್ನು ನೋಡಿ ಹೋಲಿಕೆ ಮಾಡಿ ಕದ್ದ ಕಥೆಯೋ ಅಲ್ವೋ ಎಂದು ನಿರ್ಧರಿಸಬೇಕು. ಅದಕ್ಕಾಗಿ ನಾನು ಥೀಯಟ್ಟಂನ ಸಂಪೂರ್ಣ ಸ್ಕ್ರಿಪ್ಟ್ ಅನ್ನು ಫೇಸ್‌ಬುಕ್‌ನಲ್ಲಿ ರಿವೀಲ್‌ ಮಾಡುತ್ತೇನೆ ಎಂದು ಸಸಿಧರನ್‌ ಹೇಳಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!