ಕನ್ನಡ ತಾಯಿಯ ಸೇವೆ ನಮ್ಮ ಜವಾಬ್ದಾರಿ: ಶಾಸಕ ಜಿ.ಎಸ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗದಿಂದ ಜನವರಿ 20 ಹಾಗೂ 21ರಂದು ಗಜೇಂದ್ರಗಡದಲ್ಲಿ ನಡೆಯುವ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳಲು ಪ್ರೊ. ಚಂದ್ರಶೇಖರ ವಸ್ತ್ರದ ಇವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು, ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅವರು ಶಾಲು ಹೊದಿಸಿ ಸನ್ಮಾನಿಸಿ ಆಹ್ವಾನ ನೀಡಿದರು.

Advertisement

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸಾಹಿತ್ಯ ಸಮ್ಮೇಳನ ನಮ್ಮ ಸಮ್ಮೇಳನವಾಗಿದೆ. ಜನಪ್ರತಿನಿಧಿಯಾಗಿ ಕನ್ನಡ ತಾಯಿಯ ನುಡಿಸೇವೆಯನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಮಾಡೋಣವೆಂದರು.

ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ಸಮ್ಮೇಳನದ ಅಧ್ಯಕ್ಷನಾಗಿರುವುದು ಹಿರಿಮೆಯಲ್ಲ. ಕನ್ನಡದ ಮನಸ್ಸುಗಳು ಒಕ್ಕೊರಲಿನಿಂದ ಅಧ್ಯಕ್ಷನನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅದಕ್ಕೆ ನಾನು ಋಣಿಯಾಗಿದ್ದೇನೆಂದರು.

ಈ ಸಂದರ್ಭದಲ್ಲಿ ಸಂಸ್ಕೃತಿ ಚಿಂತಕ ಸಿದ್ದಣ್ಣ ಬಂಡಿ, ವಿ.ಬಿ. ಸೋಮನಕಟ್ಟಿಮಠ, ಡಾ. ಜಿ.ಬಿ. ಪಾಟೀಲ, ಅನ್ನದಾನಿ ಹಿರೇಮಠ, ಸಿ.ಕೆ.ಎಚ್. ಶಾಸ್ತಿç, ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪೂರಿ, ಗಜೇಂದ್ರಗಡ ತಾಲೂಕಾ ಕಸಾಪ ಅಧ್ಯಕ್ಷ ಅಮರೇಶ ಗಾಣಿಗೇರ, ರೋಣ ತಾಲೂಕಾ ಕಸಾಪ ಅಧ್ಯಕ್ಷ, ರಮಾಕಾಂತ ಕಮತಗಿ, ಗದಗ ತಾಲೂಕಾ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ, ಪುಂಡಲೀಕ ಕಲ್ಲಿಗನೂರ, ವಿ.ಕೆ. ಪಾಟೀಲ, ಪಿ.ಆರ್. ಹಿರೇಮಠ, ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ. ಪ್ರೊ. ಬಸವರಾಜ ಗಿರಿತಿಮ್ಮಣ್ಣವರ, ಡಾ. ರಾಜೇಂದ್ರ ಗಡಾದ, ರತ್ನಕ್ಕ ಪಾಟೀಲ, ಕವಡಿಮಟ್ಟಿ, ಮಂಜುಳಾ ವೆಂಕಟೇಶಯ್ಯ, ಡಾ. ಅಕ್ಕಮಹಾದೇವಿ ರೊಟ್ಟಿಮಠ, ಡಾ. ಎಚ್.ಬಿ. ಪೂಜಾರ, ಬಸವರಾಜ ಗಣಪ್ಪನವರ, ಅಶೋಕ ಸತ್ಯರಡ್ಡಿ ಹಾಗೂ ಸಾಹಿತಿಗಳು, ಕಲಾವಿದರು, ಅಭಿಮಾನಿಗಳು ಹಾಜರಿದ್ದರು.

ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತ್ಯ ವಿವಿಧ ಆಯಾಮಗಳಲ್ಲಿ ಕೃಷಿಯನ್ನು ಮಾಡಿರುವ ಚಂದ್ರಶೇಖರ ವಸ್ತçದ ಅವರು ಸಾಹಿತ್ಯ ಸಂಸ್ಕೃತಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಸರ್ವಾಧ್ಯಕ್ಷತೆಯಲ್ಲಿ ಹಾಗೂ ಸಾಹಿತ್ಯ ಪೋಷಕರಾದ ಜಿ.ಎಸ್. ಪಾಟೀಲ ನೇತೃತ್ವದಲ್ಲಿ ಸಮ್ಮೇಳನ ಯಶಸ್ವಿಯಾಗಿ ಜರುಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here