ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ ಜೈಲನ್ನೇ ರೆಸಾರ್ಟ್ ಮಾಡಿಕೊಟ್ಟಿರುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಈಗ ನಡುಕ ಶುರುವಾಗಿದೆ. ದರ್ಶನ್‌ಗೆ ರಾಜಾತಿಥ್ಯಕ್ಕೆ ಅನುವು ಮಾಡಿಕೊಟ್ಟಿದ್ದ ಅಧಿಕಾರಿಗಳ ಮೇಲೆ ತೂಗುಕತ್ತಿ ತೂಗಾಡುತ್ತಿದೆ. ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿರುವದನ್ನ ತನಿಖೆ ಮಾಡಲು ಇಬ್ಬರು ಐಜಿಪಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿ ಕಾರಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ. ಇನ್ನೂ ಈ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಜೈಲಿನ ಏಳು ಅಧಿಕಾರಿಗಳನ್ನು ಅವರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ಏಳು ಅಧಿಕಾರಿಗಳನ್ನು ನಾವು ಸಸ್ಪೆಂಡ್ ಮಾಡಿದ್ದೇವೆ. ನಾನು ವರದಿಯನ್ನು ಕೇಳಿದ್ದೇವೆ. ಈ ರೀತಿಯ ಘಟನೆ ನಡೆಯಬಾರದು. ಕೆಲವರನ್ನು ಸಸ್ಪೆಂಡ್ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೇಲಧಿಕಾರಿಗಳನ್ನು ಟ್ರಾನ್ಸ್ಫಾರ್ ಮಾಡ್ತೇನೆ. ಪದೇ ಪದೇ ಈ ರೀತಿ ಆಗಬಾರದು. ಎಲ್ಲಾ ಬಂಧಿಕಾನೆಗಳಲ್ಲಿ ಸಿಸಿಟಿವ ಹಾಕುತ್ತಿದ್ದೇವೆ. ಜಾಮರ್ ಹಾಕಲಾಗುತ್ತಿದೆ. ಆದಾಗ್ಯೂ ಈ ರೀತಿಯ ಘಟನೆ ನಡೆಯುತ್ತಿದೆ’ ಎಂದು ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ.