ದಿಸ್ಪುರ್:- ಹೋಟೆಲ್ ಒಂದರಲ್ಲಿ ಸೆಕ್ಸ್ ಮೂವಿ ಶೂಟಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶಿ ಮಹಿಳೆ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿರುವ ಘಟನೆ ಅಸ್ಸಾಂನ ಗುವಾಹಟಿಯದಲ್ಲಿ ಜರುಗಿದೆ.
ಅಸ್ಸಾಂ ಮೂಲದವರಾದ ಶಫಿಕುಲ್, ಜಹಾಂಗೀರ್ ಹಾಗೂ ಬಾಂಗ್ಲಾ ನಿವಾಸಿ ಮೀನ್ ಅಖ್ತರ್ ಬಂಧಿತರು. ಆರೋಪಿಗಳು ಗುವಾಹಟಿಯ ಸೂಪರ್ ಮಾರ್ಕೆಟ್ ಪ್ರದೇಶದ ಹೋಟೆಲ್ ಒಂದರಲ್ಲಿ ಕೊಠಡಿಗಳನ್ನು ಬುಕ್ ಮಾಡಿದ್ದರು. ಅಲ್ಲಿ ಅವರು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿ ದಾಳಿ ನಡೆಸಿದ್ದರು.
ಮೀನ್ ಅಖ್ತರ್ ಬಾಂಗ್ಲಾದೇಶ ಗಡಿಗೆ ಏಕಾಂಗಿಯಾಗಿ ಪ್ರಯಾಣಿಸಿ ಉದ್ಯೋಗದ ಸುಳ್ಳು ನೆಪದಲ್ಲಿ ಭಾರತವನ್ನು ಪ್ರವೇಶಿಸಿದ್ದಾಳೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆಕೆ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೇ ಅಸ್ಸಾಂಗೆ ಪ್ರವೇಶಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಪೊಲೀಸರು ಸೂಕ್ತ ತನಿಖೆ ಕೈಗೊಂಡಿದ್ದಾರೆ.



