ಬೆಂಗಳೂರು:– ರಾಜಧಾನಿ ಬೆಂಗಳೂರಿನ ಬಿಟಿಎಂ ಲೇಔಟ್‌ನ ಲೇಡಿಸ್ ಪಿ.ಜಿಗೆ ನುಗ್ಗಿದ ಕಾಮುಕನೋರ್ವ ಯುವತಿಯ ಮೈ ಕೈ ಮುಟ್ಟಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಘಟನೆ ಜರುಗಿದೆ.
ಆ.29 ರಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಪಿ.ಜಿಗೆ ನುಗ್ಗಿದ್ದ ಅಪರಿತ ವ್ಯಕ್ತಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸಾಮಿಯು ಯುವತಿಯ ರೂಮ್‌ಗೆ ನುಗ್ಗಿದಾಗ ಆಕೆ ರೂಮ್‌ಮೇಟ್ ಇರಬಹುದು ಅಂದುಕೊಂಡಿದ್ದಳು. ಕಾಮುಕನೂ ಮೊದಲೇ ಪಿಜಿ ಫ್ಲೋರ್‌ನ ಎಲ್ಲಾ ರೂಮ್ ಡೋರ್‌ಗಳನ್ನು ಲಾಕ್ ಮಾಡಿ ಯುವತಿ ಬಳಿ ಹೋಗಿ ಆಕೆಯ ಕೈ ಕಾಲು ಮುಟ್ಟಿದ್ದಾನೆ. ಯುವತಿಗೆ ಎಚ್ಚರವಾಗಿ ಗಾಬರಿಯಿಂದ ಕಿರುಚಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದಾಳೆ.
ಈ ವೇಳೆ ಪ್ರತಿರೋಧ ಒಡ್ಡಿ, ಕೂಗಾಡಿ ಹೊರ ಬಂದಿದ್ದ ಯುವತಿಯ ಕಪಾಳಕ್ಕೆ ಹೊಡೆದು, ಆಕೆಯನ್ನು ಎಳೆದಾಡಿ ಕಾಮುಕ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.