ಬೆಂಗಳೂರು: ಹೊಳೆನರಸೀಪುರದ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ರೇವಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ರದ್ದುಗೊಳಿಸಿ ಇಂದು ಆದೇಶ ಹೊರಡಿಸಿದೆ. ದೂರು ದಾಖಲಿಸುವಲ್ಲಿ ಅತಿಯಾದ ವಿಳಂಬವಾಗಿರುವುದು ಹಾಗೂ ಪ್ರಕರಣದ ವಿಚಾರಣೆಯೂ ತಡವಾಗಿ ನಡೆದಿರುವುದನ್ನು ಗಮನಿಸಿದ ನ್ಯಾಯಾಲಯ, ಈ ಕಾರಣಗಳನ್ನು ಆಧಾರವಾಗಿಸಿಕೊಂಡು ರೇವಣ್ಣರನ್ನು ಆರೋಪಗಳಿಂದ ಮುಕ್ತಗೊಳಿಸಿದೆ.
ಮಹಿಳೆಯ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸಿದ್ದರೂ, ವಾದ–ಪ್ರತಿವಾದ ಪರಿಶೀಲಿಸಿದ ಬಳಿಕ ಕೋರ್ಟ್, ಪ್ರಕರಣ ಮುಂದುವರಿಸಲು ಬೇಕಾದಷ್ಟು ಆಧಾರ ಇಲ್ಲವೆಂದು ಅಭಿಪ್ರಾಯಪಟ್ಟಿದೆ.



