ಹಾವೇರಿ:- ಶಿಗ್ಗಾಂವಿಯ ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಮುಕನೊಬ್ಬ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಜರುಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಸೇರಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
24 ವರ್ಷದ ಶಿಗ್ಗಟ್ಟಿ, 23 ವರ್ಷದ ಮಂಜುನಾಥ ಶಿಗ್ಗಟ್ಟಿ, ಲಕ್ಷ್ಮಣ ಕಬನೂರ್, ಮಾರುತಿ ಶಿಗಟ್ಟಿ ಬಂಧಿತರು. ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ವರಲ್ಲಿ ಮೂವರು ದೌರ್ಜನ್ಯ ಎಸಗಿದ ಆರೋಪಿ ಹಾಗೂ ಸಂತ್ರಸ್ತೆಯ ಕುಟುಂಬದ ಜೊತೆ ರಾಜಿ ಪಂಚಾಯತಿ ಮಾಡಿಸಿದ್ದರು. ದೌರ್ಜನ್ಯ ಎಸಗಿದ ಆರೋಪಿ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



