ಬೆಂಗಳೂರು:- ಲೈಂಗಿಕ ಕಿರುಕುಳ ಕೊಟ್ಟ ಆರೋಪದಡಿ ಶಿಕ್ಷಕಿಯೋರ್ವರು ಕೆಪಿಸಿಸಿ ಕಾರ್ಯದರ್ಶಿ ವಿರುದ್ದ ದೂರು ಕೊಟ್ಟಿದ್ದಾರೆ.
Advertisement
ಕೆಪಿಸಿಸಿ ಕಾರ್ಯದರ್ಶಿ ಗುರಪ್ಪನಾಯ್ಡು ಅವರು, ತ್ಯಾಗರಾಜನಗರದ ತಮ್ಮ ಖಾಸಗಿ ಶಾಲೆಯ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಘಟನೆ ಸಂಬಂಧ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ಕೆಲಸ ಮಾಡುವ ಕೆಲ ಶಿಕ್ಷಕಿಯರು, ಸಿಬ್ಬಂದಿಗೂ ಕಿರುಕುಳ ನೀಡಲಾಗಿದ್ದು, ಛೇಂಬರ್‌ಗೆ ಕರೆದು ತನ್ನ ಜತೆ ಸಹಕರಿಸುವಂತೆ ಕೈಹಿಡಿದು ಎಳೆದಾಡಿ ಕೆಟ್ಟ ಪದಗಳಿಂದ ಗುರಪ್ಪನಾಯ್ಡು ನಿಂದಿಸಿರುವುದಾಗಿ ಆರೋಪ ಮಾಡಲಾಗಿದೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.