ಕೊಪ್ಪಳ:- ಚಾಕೊಲೇಟ್ ಕೊಟ್ಟು 6 ವರ್ಷದ ಬಾಲಕಿಗೆ ಕಾಮುಕನೋರ್ವ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬೇಕರಿಯೊಂದರಲ್ಲಿ ಜರುಗಿದೆ.
Advertisement
ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊಹಮ್ಮದ್ ಕುಟ್ಟಿ ಬಂಧಿತ ಆರೋಪಿ. ಘಟನೆ ಬೆನ್ನಲ್ಲೇ ಬಾಲಕಿ ಮನೆಗೆ ಹೋಗಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಸಂಬಂಧಿಕರು, ಸಾರ್ವಜನಿಕರು ಬೇಕರಿಗೆ ನುಗ್ಗಿ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ ಬೇಕರಿಯನ್ನು ಲಾಕ್ ಮಾಡಿಸಿದ್ದಾರೆ.
ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.