ಬೆಳಗಾವಿ:- ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಪಯೋಗ ಆಯಿತಾದರೂ ಸಾಕಷ್ಟು ಅನಾನುಕೂಲವೂ ಎದುರಾಗಿದೆ.
ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ, ಬರುವ ಒಂದೆರಡು ಬಸ್ ಗಳು ತುಂಬಿತುಳುಕುತ್ತಿದ್ದು, ಪ್ರಯಾಣಿಕರು ರೋಸಿ ಹೋಗಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರು ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಕೂರಲು, ನಿಲ್ಲಲೂ ಜಾಗವಿಲ್ಲದೆ ಬಸ್ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.
ಬಸ್ ಮುಂದೆಯೇ ಕುಳಿತು ಶಾಲಾ ಮಕ್ಕಳು ಪ್ರತಿಭಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರು ಗ್ರಾಮದಲ್ಲಿ ಜರುಗಿದೆ. ಗೋಕಾಕದಿಂದ ಬೈಲಹೊಂಗಲಕ್ಕೆ ಶಿವಾಪುರ ಮಾರ್ಗವಾಗಿ ಬಸ್ ಬರುತ್ತಿತ್ತು. ಬಸ್ಸು ತಡೆದು ಬಸ್ಸಿನ ಮುಂದೆ ಮಳಗಲಿ, ತಡಸಲೂರು, ಚಿಕ್ಕಬುದ್ನೂರು, ಸೇರಿದಂತೆ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಪ್ರೊಟೆಸ್ಟ್ ಮಾಡಿದ್ದಾರೆ.
ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ದಿನವೂ ವಿದ್ಯಾರ್ಥಿಗಳು ಅವಸ್ಥೆ ಪಡುತ್ತಿದ್ದಾರೆ. ಬಸ್ ನಿಲ್ಲಿಸದಿದ್ದಾಗ ಚಾಲಕ ನಿರ್ವಾಹಕರೊಡನೆ ವಿದ್ಯಾರ್ಥಿಗಳ ವಾಗ್ವಾದ ಮಾಡುತ್ತಿದ್ದಾರೆ. ಹೀಗಾಗಿ ಬೇರೆ ಬಸ್ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.